
ಸ್ವತಃ ದೇವೇಗೌಡರು ಸಹ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ (ಈ ಹಿಂದಿನ ಟ್ವಿಟ್ಟರ್) ತಮ್ಮ ಮೆಟ್ರೋ ಸಂಚಾರದ ವಿಡಿಯೋವನ್ನು ಹಂಚಿಕೊಂಡಿದ್ದು, ಈ ಹಿಂದೆ 1996 ರಲ್ಲಿ ಪ್ರಧಾನಮಂತ್ರಿಯಾಗಿದ್ದ ವೇಳೆ ಸಂಪುಟ ಸಹೋದ್ಯೋಗಿಗಳ ವಿರೋಧದ ನಡುವೆಯೂ ದೆಹಲಿ ಮೆಟ್ರೋಗೆ ಹಣಕಾಸು ಮಂಜೂರು ಮಾಡಿದ್ದನ್ನು ಸ್ಮರಿಸಿಕೊಂಡಿದ್ದಾರೆ.
ಅಲ್ಲದೆ ದೆಹಲಿ ಮೆಟ್ರೋದಲ್ಲಿ ಸಂಚರಿಸಬೇಕೆಂಬ ತಮ್ಮ ಬಹುಕಾಲದ ಕನಸು ಈ ಸಂದರ್ಭದಲ್ಲಿ ಸಾಧ್ಯವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ 91 ವರ್ಷದ ದೇವೇಗೌಡರು, ತಮ್ಮ ಈ ಸಂಚಾರದ ಸಂದರ್ಭದಲ್ಲಿ ಸಹ ಪ್ರಯಾಣಿಕರೊಂದಿಗೆ ಲವಲವಿಕೆಯಿಂದ ಮಾತನಾಡಿದ್ದಾರೆ.