
ಕ್ರಿಕೆಟ್ ಆಟಗಾರರು ಮೈದಾನದಲ್ಲಿ ಮಾತ್ರವಲ್ಲ ವೈಯಕ್ತಿಕ ವಿಚಾರಕ್ಕೂ ಚರ್ಚೆಯಲ್ಲಿರುತ್ತಾರೆ. ಅದ್ರಲ್ಲೂ ವಿಶೇಷವಾಗಿ ಪಾಕಿಸ್ತಾನದ ಆಟಗಾರರು ಆಗಾಗ ಚರ್ಚೆಗೆ ಬರ್ತಿರುತ್ತಾರೆ. ಅನೇಕ ಪಾಕಿಸ್ತಾನದ ಆಟಗಾರರು ಸೋದರ ಸಂಬಂಧಿಯನ್ನೇ ಮದುವೆಯಾಗಿದ್ದಾರೆ. ಇದ್ರಲ್ಲಿ ಪಾಕಿಸ್ತಾನದ ಮಾಜಿ ನಾಯಕ, ಶಾಹಿದ್ ಅಫ್ರಿದಿ.
ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ, ತಮ್ಮ ಚಿಕ್ಕಪ್ಪನ ಮಗಳನ್ನೇ ಮದುವೆಯಾಗಿದ್ದಾರೆ. ಅಫ್ರಿದಿ ಪತ್ನಿ ಹೆಸರು ನಾದಿಯಾ. ನಾದಿಯಾ, ಯಾವುದೇ ಪಂದ್ಯದ ವೇಳೆ ಕಾಣಿಸಿಕೊಂಡಿಲ್ಲ. ಶಾಹಿದ್ ಅಫ್ರಿದಿ 2000 ರಲ್ಲಿ ತಮ್ಮ 20 ನೇ ವಯಸ್ಸಿನಲ್ಲಿ ನಾದಿಯಾಳನ್ನು ವಿವಾಹವಾಗಿದ್ದಾರೆ. ನಾದಿಯಾ-ಶಾಹಿದ್ ಗೆ ಐದು ಮಕ್ಕಳು. ಅಕ್ಸಾ, ಅನ್ಶಾ, ಅಜ್ವಾ, ಅಸ್ಮಾರಾ ಮತ್ತು ಅರ್ವಾ ಎಂದು ಮಕ್ಕಳಿಗೆ ಹೆಸರಿಟ್ಟಿದ್ದಾರೆ.
ಪಾಕಿಸ್ತಾನದಲ್ಲಿ ಇನ್ನೂ ಅನೇಕ ಆಟಗಾರರು ಸೋದರ ಸಂಬಂಧಿಯನ್ನೇ ಮದುವೆಯಾಗಿದ್ದಾರೆ. ಅದ್ರಲ್ಲಿ ಬಾಬರ್ ಅಜಮ್ ಕೂಡ ಸೇರಲಿದ್ದಾರೆ. ಬಾಬರ್ ತಮ್ಮ ಸಹೋದರ ಸಂಬಂಧಿ ಜೊತೆ ಮುಂದಿನ ವರ್ಷ ಮದುವೆಯಾಗಲಿದ್ದಾರೆ.
ಅಫ್ರಿದಿ ಮತ್ತು ಬಾಬರ್ ಹೊರತುಪಡಿಸಿ, ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಜುರ್ ರೆಹಮಾನ್, ಸೋದರ ಸಂಬಂಧಿ ಸಮಿಯಾ ಪರ್ವೀನ್ ಶಿಮುರನ್ನು ಮದುವೆಯಾಗಿದ್ದಾರೆ. ಬಾಂಗ್ಲಾದ ಇನ್ನೊಬ್ಬ ಆಟಗಾರ ಮೊಸದ್ದೆಕ್ ಹೊಸೈನ್ 2012 ರಲ್ಲಿ ಸಹೋದರ ಸಂಬಂಧಿ ಜೊತೆ ಮದುವೆಯಾಗಿದ್ದಾರೆ.