
ಯವತಿಯೊಂದಿಗೆ ಪತಿ ತೇಜಾಗಿದ್ದ ಸಂಬಂಧವನ್ನು ಬಹಿರಂಗಪಡಿಸಲು ಕ್ಯಾಮೆರಾಗಳು ಮತ್ತು ಮಾಧ್ಯಮಗಳನ್ನು ತೇಜಾ ಅವರ ನಿವಾಸಕ್ಕೆ ನಕ್ಷತ್ರಾ ಕರೆದುಕೊಂಡು ಹೋಗಿದ್ದರು. ಮೇ 30 ರಂದು ವಿಶಾಖಪಟ್ಟಣಂನಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯ ವೀಡಿಯೊ ತ್ವರಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ನಕ್ಷತ್ರಾ ಬಾಗಿಲು ಮುರಿದು ಒಳ ಹೋಗಿದ್ದು ಅಲ್ಲಿದ್ದ ಪತಿ ಮತ್ತು ಯುವತಿಗೆ ಬೈದಿದ್ದಾರೆ. ಕೋಪಗೊಂಡ ಆಕೆ ಯುವತಿಯ ಮೇಲೆ ವಸ್ತುಗಳನ್ನು ಎಸೆದಿದ್ದಾರೆ, ಗಂಡನ ಕೆನ್ನೆಗೆ ಬಾರಿಸಿದ್ದಾರೆ.
ಆದರೆ ತನ್ನ ಪತ್ನಿ ಸುಳ್ಳು ಆರೋಪ ಮಾಡಿದ್ದಾಳೆಂದು ತೇಜ ಆರೋಪಿಸಿದ್ದಾರೆ. ಘಟನೆಯ ಹೊರತಾಗಿಯೂ, ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ ಆದರೆ ಇಬ್ಬರಿಗೂ ಕೌನ್ಸೆಲಿಂಗ್ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.
2013 ರಲ್ಲಿ ಸಿನಿಮಾವೊಂದರ ಸೆಟ್‌ನಲ್ಲಿ ಭೇಟಿಯಾದ ನಂತರ 2017 ರಲ್ಲಿ ನಕ್ಷತ್ರ ಮತ್ತು ತ್ರಿಪುರಾಣ ವೆಂಕಟ ಸಾಯಿ ತೇಜ ಮದುವೆಯಾದರು. ದಂಪತಿಗೆ ಓರ್ವ ಮಗಳಿದ್ದು 2021 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿರುವ ನೆಟ್ಟಿಗರ ಅಭಿಪ್ರಾಯಗಳು ಚರ್ಚೆಯನ್ನು ಹುಟ್ಟುಹಾಕಿವೆ. ಆಕೆ ತನ್ನ ಪತಿಯಿಂದ ಕೆಲ ವರ್ಷಗಳಿಂದ ದೂರವಾಗಿ ವಾಸಿಸುತ್ತಿದ್ದಾಳೆ. ಈಗ ಬಂದು ಹಲ್ಲೆ ಮಾಡಿದ್ದಾಳೆ. ಇತ್ತೀಚೆಗೆ ಒಬ್ಬ ವ್ಯಕ್ತಿ ತನ್ನ ಪ್ರಿಯಕರನೊಂದಿಗಿದ್ದ ತನ್ನ ಹೆಂಡತಿಯನ್ನು ಹಿಡಿದು ಆಕೆಯನ್ನು ಹೊಡೆದಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದ. ಈಗ ವೈಜಾಗ್ ಪೊಲೀಸರು ಈ ಮಹಿಳೆಯನ್ನು ಬಂಧಿಸುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ.
ಇನ್ನೊಬ್ಬರು “ಕಾನೂನಿನ ಪ್ರಕಾರ ಇಬ್ಬರು ಒಪ್ಪಿಗೆ ಇರುವ ವಯಸ್ಕರ ನಡುವಿನ ಇಂತಹ ಸಂಬಂಧ ಕಾನೂನುಬಾಹಿರವಲ್ಲ. ಮಹಿಳೆ ಮಾಡಿದ್ದು ಕಾನೂನುಬಾಹಿರವಾಗಿದೆ.” ಎಂದಿದ್ದಾರೆ.
ಮತ್ತೊಬ್ಬರು, “ಯಾರಾದರೂ ಜೀವನದ ಸಂಗಾತಿಯಿಂದ 1 ವರ್ಷಕ್ಕಿಂತ ಹೆಚ್ಚು ಕಾಲ ಬೇರೆಯಾಗಿದ್ದರೆ ಅದು ವಿಚ್ಛೇದನಕ್ಕೆ ಸಮಾನವಾಗಿರುತ್ತದೆ. ಆಕೆಗೆ 3 ವರ್ಷಗಳಿಂದ ಯಾವುದೇ ಸಮಸ್ಯೆ ಇರಲಿಲ್ಲ, ಆದರೆ ಅವನ ಸಂಬಂಧಕ್ಕಾಗಿ ಮ್ಯಾನ್ ಹ್ಯಾಂಡಲ್ ಮಾಡುತ್ತಾಳೆ.” ಎಂದಿದ್ದಾರೆ.