ರಷ್ಯಾದ ದಾಳಿಯಿಂದ ಉಕ್ರೇನ್ ಅಕ್ಷರಶಃ ತತ್ತರಿಸಿ ಹೋಗಿದೆ. ಮಾನವ ಸಂಕುಲ ಇಂದೆಂದೂ ಕಂಡಿರದಂತಹ ಕ್ಲಿಷ್ಟಕರ ಪರಿಸ್ಥಿತಿಗೆ ಉಕ್ರೇನ್ ಜನತೆ ತಲುಪಿದ್ದಾರೆ. ಪ್ರಾಣ ಉಳಿದರೆ ಸಾಕು ಎಂದು ತಾಯ್ನಾಡಿನಿಂದ ಇತರ ದೇಶಗಳಿಗೆ ಪರಾರಿಯಾಗುತ್ತಿದ್ದಾರೆ. ರಷ್ಯಾ ಯುದ್ಧ ಶುರು ಮಾಡಿದ ದಿನದಂದು, ಕೀವ್ ನಗರದಿಂದ ತನ್ನ ಮಗನೊಂದಿಗೆ ಪರಾರಿಯಾದ ಭಯಾನಕ ವೃತ್ತಾಂತದ ಬಗ್ಗೆ ಮಾಜಿ ಮಿಸ್ ಉಕ್ರೇನ್ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಅಮೇರಿಕದ ಹಾಲಿವುಡ್ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. 2018ರ ಮಿಸ್ ಉಕ್ರೇನ್ ವೆರೊನಿಕಾ ದಿಡುಸೆಂಕೊ, ಕೀವ್ ನಗರದಿಂದ ತಮ್ಮ 7 ವರ್ಷದ ಮಗನ ಜೊತೆ ತಪ್ಪಿಸಿಕೊಂಡು ಬಂದ ವೃತ್ತಾಂತವನ್ನು,ಲಾಸ್ ಏಂಜಲೀಸ್‌ನ ಮಹಿಳೆಯರ ಹಕ್ಕುಗಳ ಅಟಾರ್ನಿ ಗೊರಿಯಾ ಅಲ್ಲೆರ್ಡ್ ಅವರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸದ್ದು ಮಾಡಿದ ಪೊಲೀಸ್ ತುಪಾಕಿ; ಕೊಲೆ ಮಾಡಿ ಎಸ್ಕೇಪ್ ಆಗಿದ್ದವನ ಕಾಲಿಗೆ ಗುಂಡು..!
ರಷ್ಯಾ ದಾಳಿ ಮಾಡಿದ ಮೊದಲ ದಿನ ಭಾರೀ ಸ್ಫೋಟ, ಸೈರನ್ ಸದ್ದನ್ನು ಕೇಳಿ ಗಾಬರಿಯಿಂದ ಬೆಳಗ್ಗೆ ಎದ್ದೆವು. ಭಯಗೊಂಡು ಸಾವಿರಾರು ಉಕ್ರೇನ್ ಜನರ ರೀತಿಯೆ ನಾನೂ ಹೊರಗೆ ಓಡಿ ಬಂದೆ. ಅಂದು, ನನಗೆ ಸೈರನ್, ಬಾಂಬ್ ಸ್ಫೋಟ ಮತ್ತು ರಾಕೆಟ್ ದಾಳಿಗಳಿಲ್ಲದ ಚಿಕ್ಕ ಸ್ಥಳವೂ ಕಾಣಲಿಲ್ಲ. ಜೀವ ಕೈಯಲ್ಲಿಡಿದುಕೊಂಡು ಭಯದಲ್ಲೇ ಗಡಿ ತಲುಪಿದೆವು ಎಂದು ಅವರು ಹೇಳಿದ್ದಾರೆ.
ಬಳಿಕ, ಸಾಹಸ ಮಾಡಿ ಹೇಗೊ ಮಾಲ್ಗೊವಾ ತಲುಪಿದ್ದ ಅವರು, ಯುರೋಪಿಯನ್ ದೇಶಗಳನ್ನು ದಾಟಿ ಸ್ವಿಡರ್ಲೆಂಡ್‌ನ ಜಿನಿವಾ ತಲುಪಿದ್ದರು. ವೆರೋನಿಕಾ ಪ್ರಕಾರ, ಉಕ್ರೇನ್‌ನಿಂದ ಅಮೇರಿಕ ತಲುಪಲು ಅವರು, ನಾಲ್ಕು ದೇಶಗಳನ್ನು ದಾಟಿದ್ದಾರೆ. ಈ ಮೊದಲೇ ಅವರ ಬಳಿ ಅಮೇರಿಕಾದ ವೀಸಾ ಇದ್ದದ್ದರಿಂದ ಅಮೇರಿಕಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಆಕೆಯ ಮಗನ ವೀಸಾ ಸಮಸ್ಯೆಯಿಂದಾಗಿ ಆತನನ್ನು ಸ್ವಿಟ್ಜರ್ಲೆಂಡ್ ನ ಜಿನಿವಾದಲ್ಲೇ ಬಿಡಲಾಗಿದೆ ಎಂದು ವೆರೊನಿಕಾ ತಿಳಿಸಿದ್ದಾರೆ.
ಇದೀಗ, ಉಕ್ರೇನ್‌ನ ಲಕ್ಷಾಂತರ ಮಕ್ಕಳು ಮತ್ತು ಅವರ ತಾಯಂದಿರು ಮೆಟ್ರೊ ಸುರಂಗ ಮಾರ್ಗಗಳು ಮತ್ತು ಬಾಂಬ್ ಶೆಲ್ಟರ್‌ಗಳಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಪ್ರತಿ ಸ್ಫೋಟದ ಶಬ್ದಕ್ಕೂ ನಡುಗುತ್ತಿದ್ದಾರೆ. ಈ ಆಶ್ರಯ ತಾಣಗಳಲ್ಲೇ ಹಲವು ಗರ್ಭಿಣಿ ಮಹಿಳೆಯರು ಮಕ್ಕಳಿಗೆ ಜನ್ಮ ನೀಡುತ್ತಿರುವುದು ಹೃದಯ ವಿದ್ರಾವಕವಾಗಿದೆ ಎಂದು ದಿಡುಸೆಂಕೊ ಹೇಳಿದರು.
ಈ ಮಧ್ಯೆ, ತನ್ನ ಮಗನ ವೀಸಾಗೆ ಅನುಮತಿ ಕೋರಿ ಅಮೆರಿಕದಲ್ಲಿ ಸಲ್ಲಿಸಲಾಗಿದ್ದ ಅರ್ಜಿ ತಿರಸ್ಕೃತಗೊಂಡಿರುವ ಬಗ್ಗೆ ಮಾಹಿತಿ ನೀಡಿರುವ ಅವರು, ಉಕ್ರೇನ್ ಪ್ರಜೆಗಳು ತಮ್ಮ ದೇಶದ ರಕ್ಷಣೆಗೆ ಬದ್ಧರಾಗಿದ್ದಾರೆ. ಅವರಿಗೆ, ಇತರೆ ದೇಶಗಳಿಂದ ನೆರವಿನ ಅಗತ್ಯವಿದೆ ಎಂದಿದ್ದಾರೆ.