alex Certify BIG NEWS: ಮಾಜಿ ಸಚಿವರ ಪುತ್ರನಿಗೆ ಬ್ಲಾಕ್ ಮೇಲ್: ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಹಾಗೂ ಆಕೆಯ ಪತಿಯನ್ನು 8 ದಿನ ಕಸ್ಟಡಿಗೆ ಪಡೆದ ಸಿಸಿಬಿ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಾಜಿ ಸಚಿವರ ಪುತ್ರನಿಗೆ ಬ್ಲಾಕ್ ಮೇಲ್: ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಹಾಗೂ ಆಕೆಯ ಪತಿಯನ್ನು 8 ದಿನ ಕಸ್ಟಡಿಗೆ ಪಡೆದ ಸಿಸಿಬಿ ಪೊಲೀಸರು

ಬೆಂಗಳೂರು: ಮಾಜಿ ಸಚಿವರ ಪುತ್ರನಿಗೆ ಬ್ಲಾಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿಯನ್ನು ಬಂಧಿಸಿದ್ದು, ಕಸ್ಟಡಿಗೆ ಪಡೆದಿದ್ದಾರೆ.

ಮಾಜಿ ಸಚಿವ ಪುತ್ರನಿಗೆ ಮೆಸೇಜ್ ಮೂಲಕ ಪರಿಚಯಿಸಿಕೊಂಡು ಬಳಿಕ ಅಸ್ಲೀಲ ಸಂದೇಶ ರವಾನೆ, ವಾಟ್ಸಪ್ ಕಾಲ್, ವಿಡಿಯೋ ಕಾಲ್ ಮಾಡಿದ್ದ ಆರೋಪಿ ಮಹಿಳೆ ಮಂಜುಳಾ ಪಾಟೀಲ್ ಬಳಿಕ 20 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಇದಕ್ಕೆ ಪತಿ ಶಿವರಾಜ್ ಪಾಟೀಲ್ ಸಾಥ್ ನೀಡಿದ್ದ ಎನ್ನಲಾಗಿದೆ.

ಮಾಜಿ ಸಚಿವರ ಪುತ್ರ ನೀಡಿದ ದೂರಿನ ಹಿನ್ನೆಲೆಯಲ್ಲಿ ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿ ಶಿವರಾಜ್ ಪಾಟೀಲ್ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಹೆಚ್ಚಿನ ವಿಚಾರಣೆ ನಡೆಸುವ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು 8 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.

ಆರೋಪಿಗಳ ಮೊಬೈಲ್ ಫೋನ್ ವಶಕ್ಕೆ ಪಡೆದು, ವಾಟ್ಸಪ್ ಸಂದೇಶ, ವಿಡಿಯೋ ಕಾಲ್, ಫೋನ್ ರೆಕಾರ್ಡ್ ಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...