ಅಘ್ಘಾನಿಸ್ತಾದಲ್ಲಿ ತಾಲಿಬಾನಿಗಳ ಆಳ್ವಿಕೆ ಶುರುವಾಗ್ತಿದ್ದಂತೆ ಜನರು ದೇಶ ತೊರೆಯುತ್ತಿದ್ದಾರೆ. ಅನೇಕ ನಾಯಕರು ಮತ್ತು ಸೆಲೆಬ್ರಿಟಿಗಳು ಅಫ್ಘಾನಿಸ್ತಾನ ತೊರೆದಿದ್ದಾರೆ.
ಅಧ್ಯಕ್ಷ ಅಶ್ರಫ್ ಘನಿ ಯುಎಇಯಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಅಫ್ಘಾನಿಸ್ತಾನದ ಮಾಜಿ ಸಂವಹನ ಸಚಿವರ ಬಗ್ಗೆ ಆಸಕ್ತಿದಾಯಕ ವಿಷ್ಯ ಹೊರ ಬಿದ್ದಿದೆ.
ಅಫ್ಘಾನಿಸ್ತಾನದ ಮಾಜಿ ಮಂತ್ರಿ, ಒಂದು ಕಾಲದಲ್ಲಿ ಸೂಟ್ ಬೂಟ್ ಧರಿಸಿ ಭದ್ರತೆಯ ರಕ್ಷಣೆಯಲ್ಲಿದ್ದವರು ಈಗ ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಕೆಲಸ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದ ಮಾಜಿ ಸಚಿವ ಸೈಯದ್ ಅಹ್ಮದ್ ಶಾ ಸಾದತ್ ಫೋಟೋವನ್ನು ಗಲ್ಫ್ ದೇಶದ ಮಾಧ್ಯಮಗಳು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿವೆ.
ಈಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜರ್ಮನ್ ಮಾಧ್ಯಮದ ಪ್ರಕಾರ, ಸೈಯದ್, ಜರ್ಮನಿಯ ಲೆಫೆರಾಂಡೋ ನೆಟ್ವರ್ಕ್ ನಲ್ಲಿ ಕೆಲಸ ಮಾಡುತ್ತಿದ್ದಾರಂತೆ. ಹಾಗಾಗಿ ಸೈಕಲ್ ನಲ್ಲಿ ಮನೆ ಮನೆಗೆ ಹೋಗಿ ಪಿಜ್ಜಾ ನೀಡ್ತಿದ್ದಾರಂತೆ.
ಸಾದತ್ ಕಳೆದ ವರ್ಷವೇ ಅಶ್ರಫ್ ಘನಿ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿದ ನಂತರ, ಅವರು ಜರ್ಮನಿಯಲ್ಲಿ ವಾಸಿಸಲು ಪ್ರಾರಂಭಿಸಿದ್ದರು.