ಮುಂಬೈ ಇಂಡಿಯನ್ ಮಾಜಿ ಬೌಲರ್ ಜೇಮ್ಸ್ ಫ್ರಾಂಕ್ಲಿನ್ ಯುಜ್ವೇಂದ್ರ ಚಹಲ್ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರಸ್ತುತ ರಾಜಸ್ಥಾನ್ ರಾಯಲ್ಸ್‌ನ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಡ್‌ಕ್ಯಾಸ್ಟ್‌ನಲ್ಲಿ ಆಘಾತಕಾರಿ ಸಂಗತಿ ಬಹಿರಂಗಪಡಿಸಿದ್ದರು.
ಚಹಾಲ್ 2011 ರಲ್ಲಿ ತನ್ನ ಮುಂಬೈ ಇಂಡಿಯನ್ಸ್ ತಂಡದ ಸಹ ಆಟಗಾರರು ತಮ್ಮ ಗೆಲುವನ್ನು ಆಚರಿಸುವಾಗ ಕಿರುಕುಳ ಅನುಭವಿಸಿದ್ದನ್ನು ನೆನಪಿಸಿಕೊಂಡಿದ್ದರು.
ಇಬ್ಬರೂ ತನ್ನ ಬಾಯಿಗೆ ಟೇಪ್ ಹಾಕಿ, ಕೋಣೆಯಲ್ಲಿ ಬಿಟ್ಟು ಇಡೀ ರಾತ್ರಿ ತನ್ನನ್ನು ಮರೆತುಬಿಟ್ಟರು ಎಂದು ಚಹಾಲ್ ಆರೋಪಿಸಿದ್ದರು.
2011ರಿಂದ 2013 ರವರೆಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಫ್ರಾಂಕ್ಲಿನ್ ಸದಸ್ಯರಾಗಿದ್ದರು. ನ್ಯೂಜಿಲೆಂಡ್‌ನ ಮಾಜಿ ವೇಗಿ ಜೇಮ್ಸ್ ಫ್ರಾಂಕ್ಲಿನ್ ಹಾಗೂ ಆಸ್ಟ್ರೇಲಿಯಾದ ಆಂಡ್ರೂ ಸೈಮಂಡ್ಸ್ ಕಿರುಕುಳ ನೀಡಿದ್ದಾರೆಂಬ ಆರೋಪವಿದೆ.
ಯುಜಿ ವಿರುದ್ಧದ ದೈಹಿಕ ಕಿರುಕುಳದ ಆರೋಪದ ಬಗ್ಗೆ ಜೇಮ್ಸ್ ಫ್ರಾಂಕ್ಲಿನ್ ಅವರೊಂದಿಗೆ ಖಾಸಗಿಯಾgi ಮಾತನಾಡುವುದಾಗಿ ಡರ್ಹಾಮ್ ಕ್ಲಬ್ ಹೇಳಿದೆ. ಈ ಕ್ಲಬ್‌ನಲ್ಲಿ ಫ್ರ್ಯಾಂಕ್ಲಿನ್ ಮುಖ್ಯ ಕೋಚ್ ಆಗಿದ್ದಾರೆ.
ನಮ್ಮ ಮೆಂಬರ್ ಸ್ಟಾಫ್ ಹೆಸರಿಸುವ 2011 ರಲ್ಲಿ ನಡೆದ ಘಟನೆಯ ಸುತ್ತಲಿನ ಇತ್ತೀಚಿನ ವರದಿಗಳ ಬಗ್ಗೆ ನಮಗೆ ತಿಳಿದಿದೆ. ವಾಸ್ತವ ಸಂಗತಿ ಅರಿಯಲು ಎಲ್ಲರ ಜೊತೆಗೂ ಚರ್ಚೆ ಮಾಡಲಾಗುತ್ತದೆ ಎಂದು ಡರ್ಹಾಮ್ ತಿಳಿಸಿದೆ. ಚಹಾಲ್ ಪ್ರಕಾರ, ಯಾವುದೇ ಆಟಗಾರರು ಇದುವರೆಗೆ ಕ್ಷಮೆ ಕೇಳಿಲ್ಲ.
2013 ರಲ್ಲಿ ಐಪಿಎಲ್ ಪಂದ್ಯದ ನಂತರದ ಪಾರ್ಟಿಯ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿ ಆಟಗಾರನೊಬ್ಬ ಬೆಂಗಳೂರಿನ ಹೋಟೆಲ್‌ನ 15 ನೇ ಮಹಡಿಯ ಬಾಲ್ಕನಿಯಲ್ಲಿ ನೇತುಹಾಕಿದ ಆಘಾತಕಾರಿ ಘಟನೆಯನ್ನು ಯುಜಿ ಬಹಿರಂಗಪಡಿಸಿದ ನಂತರ ಫ್ರಾಂಕ್ಲಿನ್ ಮತ್ತು ಸೈಮಂಡ್ಸ್ ವಿರುದ್ಧದ ಆರೋಪಗಳು ಮುನ್ನೆಲೆಗೆ ಬಂದಿವೆ.