ಪಕ್ಷಿಗಳು, ಹುದ್ದೆಯಲ್ಲಿದ್ದಾಗ ಮಾಡಿದ ಅಧಿಕೃತ ಭೇಟಿಗಳು ಮತ್ತು ರಾಷ್ಟ್ರಪತಿ ಭವನದ ಅನೇಕ ಆಸಕ್ತಿಕರ ಆಯಾಮಗಳ ಕುರಿತು ಪುಸ್ತಕಗಳನ್ನು ಬರೆದಿರುವ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಇದೀಗ ದೇಶದ ಅತ್ಯಂತ ಗೌರವಾನ್ವಿತ ಉದ್ಯಮಿ ರತನ್ ಟಾಟಾ ಅವರ ಆತ್ಮ ಚರಿತ್ರೆ ಬರೆಯಲು ಮುಂದಾಗಿದ್ದಾರೆ.
ಡಾ. ಥಾಮಸ್ ಮ್ಯಾಥ್ಯೂ ಹೆಸರಿನ, 1983ರ ಬ್ಯಾಚ್‌ನ ಐಎಎಸ್ ಆಧಿಕಾರಿ ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾಗಿದ್ದ ವೇಳೆ ಅವರ ಬಳಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಇದೀಗ ಅವರು ಟಾಟಾ ಸನ್ಸ್‌ನ ಚೇರ್ಮನ್ ಎಮಿರಿಟಸ್‌ರ ಆತ್ಮಚರಿತ್ರೆ ಬರೆಯಲಿದ್ದು, ಅದು ಈ ವರ್ಷದ ನವೆಂಬರ್‌ನಲ್ಲಿ ಪ್ರಕಟಣೆಯಾಗುವ ಸಾಧ್ಯತೆ ಇದೆ.
ಉದ್ಯೋಗಾವಕಾಶ: ಭೂಮಾಪಕರ ಹುದ್ದೆಗೆ ಆನ್ ಲೈನ್ ಅರ್ಜಿ ಆಹ್ವಾನ
ಅಮೆರಿಕದ ಮಾಜಿ ಅಧ್ಯಕ್ಷ ರಿಚರ್ಡ್ ನಿಕ್ಸನ್‌ರ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ಶ್ವೇತಭನವದಲ್ಲಿ ಕಾರ್ಯದರ್ಶಿಯ ಹುದ್ದೆಯಲ್ಲಿ ಕೆಲಸ ಮಾಡಿರುವ ಹೆನ್ರಿ ಕಿಸ್ಸಿಂಜರ್‌ರಿಂದ ಹಿಡಿದು ಮುಂಬಯಿಯ ಜಿಟಿ ಆಸ್ಪತ್ರೆಯ ಜಾನಿಟರ್‌ವರೆಗೂ ಭಿನ್ನ ಮಜಲುಗಳ ವ್ಯಕ್ತಿಗಳಿಂದ ರತನ್ ಟಾಟಾ ಕುರಿತಂತೆ ಈ ಪುಸ್ತಕದಲ್ಲಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು.
’ರತನ್ ಎನ್ ಟಾಟಾ: ಆನ್ ಎ ಅಥರೈಸ್ಡ್ ಬಯೋಗ್ರಾಫಿ’ ಹೆಸರಿನ ಪುಸ್ತಕದ ಜಾಗತಿಕ ಪ್ರಕಟಣೆ ಹಾಗೂ ವಿತರಣೆ ಹಕ್ಕುಗಳನ್ನು ಅದಾಗಲೇ ಹಾರ್ಪರ್ ಕಾಲಿನ್ಸ್ ಬುಟ್ಟಿಗೆ ಹಾಕಿಕೊಂಡಿದೆ.
“ಸಾಕಷ್ಟು ಕಠಿಣ ಹಾದಿಗಳನ್ನು ದಾಟಿ ಬಂದು, ಉದ್ಯಮದ ಕಟ್ಟಳೆಗಳನ್ನು ಮೀರಿ ಸಹಾನುಭೂತಿಗೆ ಆದ್ಯತೆ ಕೊಟ್ಟು, ಎರಡೂ ರೀತಿಯ ಗುರಿಗಳನ್ನು ಸಾಧಿಸಿ, ಜಾಗತಿಕ ವೇದಿಕೆಯಲ್ಲಿ ಭಾರತದ ಆಶಾಭಾವನೆಗಳನ್ನು ಬಿಂಬಿಸಿ ಕಳೆದ ಕೆಲ ದಶಕಗಳಿಂದ ತಮ್ಮ ಪ್ರಭಾವವನ್ನು ಇನ್ನಷ್ಟು ಹೆಚ್ಚಿಸಿಕೊಂಡಿರುವ ಟಾಟಾರ ಕಥೆಯನ್ನು ಈ ಪುಸ್ತಕ ಹೇಳಲಿದೆ,” ಎಂದು ತಿಳಿದು ಬಂದಿದೆ.