ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಗೂಗಲ್‌ನ ಮಾಜಿ ಎಂಡಿ ಪರ್ಮಿಂದರ್ ಸಿಂಗ್ ಅವರಿಗೆ ಇಷ್ಟವಾಗುವ ಭಾರತೀಯ ತಿಂಡಿ ಯಾವುದು ಗೊತ್ತಾ? ಅವರು ವಿದೇಶಕ್ಕೆ ಪ್ರತಿಬಾರಿ ಕೊಂಡೊಯ್ಯುವ ತಿಂಡಿ ಯಾವುದು ಅನ್ನೋದನ್ನ ಅವರೇ ರಿವೀಲ್ ಮಾಡಿದ್ದಾರೆ.
ಅವರು ಭಾರತದಿಂದ ಸಿಂಗಾಪುರಕ್ಕೆ ಹೋಗುವಾಗ ದೊಡ್ಡ ಪ್ರಮಾಣದಲ್ಲಿ ಪ್ಯಾಕ್ ಮಾಡುವ ಅವರ ಅತ್ಯಂತ ಇಷ್ಟವಾದ ತಿಂಡಿಗಳ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಅವರ ಅತ್ಯಂತ ಪ್ರಿಯವಾದ ತಿಂಡಿಯೆಂದರೆ ಸಿಂಗ್ ಸೂಜಿ ರಸ್ಕ್. ಅದನ್ನು ತುಂಬಾ ಪ್ರೀತಿಸುವ ಅವರು ಸೂಜಿ ರಸ್ಕ್ ಅನ್ನು ಪರಿಪೂರ್ಣ ಚಾಯ್ ಕಂಪ್ಯಾನಿಯನ್ ! ಎಂದು ಟ್ವಿಟರ್‌ನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಮೇಜಿನ ಮೇಲೆ ಇರಿಸಲಾಗಿರುವ ಸೂಜಿ ರಸ್ಕ್‌ಗಳ ದೊಡ್ಡ ಪ್ಯಾಕ್ ಗಳನ್ನು ಎರಡು ಸಾಲಿನಲ್ಲಿ ಜೋಡಿಸಿಟ್ಟಿರುವ ಚಿತ್ರ ಹಾಕಿದ್ದು, “ಭಾರತದಿಂದ ಹಿಂತಿರುಗಿ ತರಬೇಕಾದ ಅತ್ಯಂತ ಅಮೂಲ್ಯವಾದ ವಸ್ತುವೆಂದರೆ ಸೂಜಿ ರಸ್ಕ್ ಗಳು ! ನಾವು ಇದನ್ನು ಆಗಾಗ್ಗೆ ಮತ್ತು ಎಷ್ಟು ದೊಡ್ಡ ಪ್ರಮಾಣದಲ್ಲಿ ಮಾಡುತ್ತೇವೆ ಎಂದರೆ ಚಾಂಗಿ ವಿಮಾನ ನಿಲ್ದಾಣದಲ್ಲಿರುವ ಜನರು ಸಹ ಅದನ್ನು ಜೆಂಗಾ ಬ್ಲಾಕ್‌ಗಳು ಅಥವಾ ಚಿನ್ನದ ಬಾರ್‌ಗಳೊಂದಿಗೆ ಗೊಂದಲಗೊಳಿಸುವುದಿಲ್ಲ!” ಎಂದು ಪೋಸ್ಟ್ ಮಾಡಿದ್ದಾರೆ.
ಪರ್ಮಿಂದರ್ ಸಿಂಗ್ ಅವರ ಟ್ವೀಟ್ ಗೆ ಹಲವರು ಪ್ರತಿಕ್ರಿಯಿಸಿದ್ದು ಅದ್ಭುತ ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ.