ಬೆಂಗಳೂರು : ಕೆಲವು ದಿನಗಳ ಹಿಂದೆ ಪೆನ್ ಡ್ರೈವ್ ಬಾಂಬ್ ಸ್ಪೋಟಿಸಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಇದೀಗ ಮತ್ತೆ ಪೆನ್ ಡ್ರೈವ್ ಸ್ಪೋಟದ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನನ್ನ ಬಳಿ ಇರುವುದು ಖಾಲಿ ಪೆನ್ ಡ್ರೈವ್ ಅಲ್ಲ ಎಂದರು. ನಾಳೆ ಪೆನ್ ಡ್ರೈವ್ ರಿಲೀಸ್ ಮಾಡಿದ್ರೆ ಫೇಕ್ ಅಂತಾರೆ ಎಂದು ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಮೊಯ್ಲಿ ಅವರ ಕಾಲದಲ್ಲಿ ಏನೋ ಆಡಿಯೋ ಮಾಡಿದ್ರು, ಯಾವುದಾದರೂ ತಾರ್ಕಿಕ ಅಂತ್ಯ ಕಂಡಿದ್ದಾವಾ..? ಎಂದು ಹೆಚ್ಡಿಕೆ ತಿರುಗೇಟು ನೀಡಿದರು.ನಿಮ್ಮ ಯೋಗ್ಯತೆಗೆ ಯಾವುದಾದರೂ ಒಂದು ಹಗರಣದ ಬಗ್ಗೆ ದಾಖಲೆ ಸಹಿತ ತನಿಖೆ ಮಾಡಿದ್ದೀರಾ..? ಭ್ರಷ್ಟಾಚಾರ ನಡೆಯುತ್ತಿದೆ ಎಂದು ನಿಮ್ಮ ಬಸವರಾಜ ರಾಯರೆಡ್ಡಿ ಅವರೇ ಹೇಳಿದ್ದಾರೆ..? ಇದಕ್ಕೆ ಸಿಎಂ ಏನು ಉತ್ತರ ಕೊಡುತ್ತೀರಿ..? 2 ದಿವಸ ಕಳೆಯಿರಿ..ಇದರ ಬಗ್ಗೆ ಸಂಪೂರ್ಣವಾಗಿ ಮಾತನಾಡುತ್ತೇನೆ ಎಂದು ಹೆಚ್ಡಿಕೆ ಕಿಡಿಕಾರಿದರು.