ಬೆಂಗಳೂರು : ದತ್ತಮಾಲೆ ಧರಿಸುವ ಮಾಜಿ ಸಿಎಂ ಕುಮಾರಸ್ವಾಮಿ ನಿರ್ಧಾರ ಸ್ವಾಗತಾರ್ಹ ಎಂದು ಮಾಜಿ ಸಚಿವ , ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅಶೋಕ್ . ಇದು ಭಾರತದ ಪರಂಪರೆ. ನಮ್ಮ ತಂದೆ ತಾತ ಎಲ್ಲರೂ ದತ್ತಮಾಲೆ ಧರಿಸಿದ್ದರು. ದತ್ತಮಾಲೆ ಧರಿಸುವ ಮಾಜಿ ಸಿಎಂ ಕುಮಾರಸ್ವಾಮಿ ನಿರ್ಧಾರ ಸ್ವಾಗತಾರ್ಹ ಎಂದು ಮಾಜಿ ಸಚಿವ ಆರ್.ಅಶೋಕ್ ಹೇಳಿದರು.
ಕಾನೂನು ಬಾಹಿರವಾದ ಯಾವ ಕೆಲಸವವನ್ನೂ ನಾವು ಮಾಡಲ್ಲ, ದತ್ತಮಾಲೆ ಧರಿಸುವುದು ಕಾನೂನು ಬಾಹಿರವಲ್ಲ ಎಂದು ಅವರು ಹೇಳಿದರು. ದೇವರ ಮೇಲೆ ಭಕ್ತಿ ತೋರಿಸುವುಕ್ಕೆ ಭೇದ ಭಾವ ಬೇಡ. ಹಿಂದೂ ದ್ವೇಷ ಮಾಡೋದು ನಿಲ್ಲಿಸಬೇಕು ಎಂದರು.