ಬೆಂಗಳೂರು : ಮುನಿಸು ಮರೆತು ಮಾಜಿ ಸಿಎಂ ಕುಮಾರಸ್ವಾಮಿ ಅವರು ಇಂದು ಸಂಸದೆ ಸುಮಲತಾ ಅವರನ್ನು ಭೇಟಿ ಮಾಡಿ ಮಂಡ್ಯದಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.
ಬೆಂಗಳೂರಿನ ಜೆಪಿ ನಗರದಲ್ಲಿರುವ ಸಂಸದೆ ಸುಮಲತಾ ನಿವಾಸಕ್ಕೆ ಹೆಚ್ಡಿಕೆ ಆಗಮಿಸಿದ್ದು, ಮಾಜಿ ಸಿಎಂ ಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಷ್ ಸ್ವಾಗತ ಕೋರಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ಕುಮಾರಸ್ವಾಮಿ ಅವರು ಸುಮಲತಾರನ್ನು ಭೇಟಿ ಮಾಡಿ ಮಂಡ್ಯ ಕ್ಷೇತ್ರಕ್ಕೆ ಬೆಂಬಲ ನೀಡುವಂತೆ ಮನವಿ ಸಲ್ಲಿಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಹೆಚ್ಡಿಕೆ ಏ.4 ರಂದು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸುತ್ತೇನೆ. ಏ 3 ರಂದು ಸುಮಲತಾ ಬೆಂಬಲಿಗರ ಜೊತೆ ಸಭೆ ನಡೆಸಿ ನಂತರ ನಿರ್ಧಾರ ತಿಳಿಸಿವುದಾಗಿ ಹೇಳಿದ್ದಾರೆ. ಅಂಬರೀಷ್ ಅಣ್ಣನ ಮನೆ ನನಗೇನು ಹೊಸದಲ್ಲ, ನಾನು ಅವರು ಒಟ್ಟಿಗೆ ಉಂಡು ತಿಂದು ಬೆಳೆದವರು ಎಂದು ಹೆಚ್ಡಿಕೆ ಹೇಳಿದ್ದಾರೆ.