ಮುಖ್ಯ ಜಾಗೃತ ಆಯೋಗದ ಕಮಿಷನರ್ ಆಗಿದ್ದ ಅರುಣ್ ಕುಮಾರ್ ಬಿಹಾರದ ಸಿತಾಮರ್ಹಿ ಜಿಲ್ಲೆಯ ಸೋನ್ ಬರ್ಸಾ ಬ್ಲಾಕ್ನ ಪಂಚಾಯತ್ ಚುನಾವಣೆಯಲ್ಲಿ ಆರಾಮದಾಯಕ ಗೆಲುವು ಸಾಧಿಸಿದ್ದಾರೆ.
ಅರುಣ್ ಕುಮಾರ್ ಪತ್ನಿ ರಿತು ಜೈಸ್ವಾಲ್ ಸೆಲೆಬ್ರಿಟಿ ಮುಖಿಯಾ ಹಾಗೂ ಚಾಂಪಿಯನ್ಸ್ ಆಫ್ ಚೇಂಜ್ ವಿಜೇತೆ ಹಾಗೂ ದೀನ್ ದಯಾಳ್ ಉಪಾಧ್ಯಾಯ್ ಪಂಚಾಯತ್ ಸಶಕ್ತೀಕರಣ ಪುರಸ್ಕಾರ್ನ ಡೀನ್ ಆಗಿದ್ದಾರೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯ ಅಲ್ಪ ಅಂತರಗಳಲ್ಲಿ ಸೋತಿದ್ದಾರೆ.
ಪತ್ನಿಯು ರಾಜಕೀಯ ಹಾದಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿರುವ ನಡುವೆಯೇ ಮಾಜಿ ಅಧಿಕಾರಿ ಅರುಣ್ ಕುಮಾರ್ ಕೂಡ ಇದೀಗ ತಮ್ಮ ಪತ್ನಿಯ ಹಾದಿಯನ್ನು ತುಳಿದಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಅರುಣ್ ಕುಮಾರ್, ನಾನು ಸುಮಾರು ಮೂರರಲ್ಲಿ ಎರಡು ಭಾಗದಷ್ಟು ಮತವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ. ಉಳಿದ ಒಂಭತ್ತು ಅಭ್ಯರ್ಥಿಗಳು ಒಟ್ಟಾಗಿ ಮೂರರಲ್ಲಿ ಕೇವಲ ಒಂದು ಭಾಗದಷ್ಟೇ ಮತವನ್ನು ಸಂಪಾದಿಸುವಲ್ಲಿ ಶಕ್ತರಾಗಿದ್ದಾರೆ. ನಾನು ರೈತರ ಆದಾಯವನ್ನು ಹೆಚ್ಚಿಸುವಂತಹ ಕೆಲಸವನ್ನು ಮಾಡುತ್ತೇನೆ. ನನ್ನ ಪತ್ನಿ ಮಹಿಳಾ ಸಬಲೀಕರಣದ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ ಎಂದು ಹೇಳಿದರು.
ಬೆಲೆ ಏರಿಕೆಯಿಂದಾಗಿ ರೈತರು ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಕನಿಷ್ಟ ಬೆಂಬಲ ಬೆಲೆ ಕೂಡ ಸಿಗುತ್ತಿಲ್ಲ. ಬ್ಲಾಕ್ ಮಾರ್ಕೆಟ್ನಲ್ಲಿ ಅತೀ ಹೆಚ್ಚು ದರಕ್ಕೆ ರಸಗೊಬ್ಬರಗಳನ್ನು ಖರೀದಿ ಮಾಡಬೇಕಾದ ಅನಿವಾರ್ಯತೆ ಇದೆ. ಇದೆಲ್ಲದು ಸಾಲದು ಎಂಬಂತೆ ಗಡಿಯುದ್ದಕ್ಕೂ ಕಳ್ಳ ಸಾಗಣೆ ಕೆಲಸ ನಡೆಯುತ್ತಿದೆ ಎಂದು ಅರುಣ್ ಕುಮಾರ್ ಹೇಳಿದ್ರು.