ಚಂಡೀಗಢ: ಕೋರ್ಟ್ ಆವರಣದಲ್ಲಿಯೇ ಶೂಟೌಟ್ ನಡೆದಿದ್ದು, ಮಾಜಿ ಎಐಜಿಯೊಬ್ಬರು ತನ್ನ ಅಳಿಯನನ್ನೇ ಗುಂಡಿಟ್ಟು ಹತ್ಯೆಗೈದಿರುವ ಘಟನೆ ಪಂಜಾಬ್ ನ ಚಂಡೀಗಢ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ.
ಪಂಜಾಬ್ ಪೊಲೀಸ್ ನ ಮಾಜಿ ಎಐಜಿ ಮಲ್ವಿಂದರ್ ಸಿಂಗ್ ಸಿಧು, ಐಆರ್ ಎಸಧಿಕಾರಿಯಾಗಿದ್ದ ತನ್ನ ಅಳಿಯನ ಮೇಲೆ ಗುಂಡಿನ ದಾಳಿ ನಡೆಸಿ, ಕೋರ್ಟ್ ಆವರಣದಲ್ಲಿಯೇ ಹತ್ಯೆಗೈದಿದ್ದಾರೆ. ಕೌಟುಂಬಿಕ ಕಲಹವೇ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.
ಮಾಜಿ ಎಐಜಿ ಮಲ್ವಿಂದರ್ ಸಿಂಗ್ ಹಾಗೂ ಕೃಷಿ ಇಲಾಖೆಯಲ್ಲಿ ಐಆರ್ ಎಸ್ ಅಧಿಕಾರಿಯಾಗಿದ್ದ ಅಳಿಯನ ಕುಟುಂಬಳ ನಡುವೆ ಕಲಹವೇರ್ಪಟ್ಟಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಎರಡೂ ಕುಟುಂಬದ ಕಡೆಯವರು ಇಂದು ಚಂಡೀಗಢ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಕೋರ್ಟ್ ಗೆ ಹಾಜರಾಗಿದ್ದ ವೇಳೆಯೇ ಮಲ್ವಿಂದರ್ ಸಿಂಗ್, ಅಳಿಯನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಐಆರ್ ಎಸ್ ಅಧಿಕಾರಿ ಅಳಿಯನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಆರೋಪಿ ಮಾಜಿ ಎಐಜಿ ಮಲ್ವಿಂದರ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.