ನವದೆಹಲಿ: ಕೇಂದ್ರ ಸರ್ಕಾರಿ ನೌಕರರು 8ನೇ ವೇತನ ಆಯೋಗ ರಚನೆಯ ನಿರೀಕ್ಷೆಯಲ್ಲಿದ್ದಾರೆ. 8ನೇ ವೇತನ ಆಯೋಗ ರಚನೆಯಾದಲ್ಲಿ ವೇತನ ಭರ್ಜರಿ ಏರಿಕೆಯಾಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ ಶೇಕಡ 186 ರಷ್ಟು ಏರಿಕೆಯಾಗಲಿದ್ದು, ಕನಿಷ್ಠ ಮೂಲ ವೇತನ ಈಗಿರುವ 18 ಸಾವಿರ ರೂ.ಗಳಿಂದ 51,480 ರೂ. ಗೆ ಏರಿಕೆಯಾಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಫೆಬ್ರವರಿ 1ರಂದು ಮಂಡೆಯಾಗಲಿರುವ ಕೇಂದ್ರ ಬಜೆಟ್ ನಲ್ಲಿ 8ನೇ ವೇತನ ಆಯೋಗ ರಚಿಸಬಹುದು. ಸುಮಾರು 1 ಕೋಟಿಗೂ ಅಧಿಕ ಸಂಖ್ಯೆಯಲ್ಲಿರುವ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.