ಭಾರತದಲ್ಲಿ ಆಧಾರ್ ಅತ್ಯಗತ್ಯ ಗುರುತಿನ ದಾಖಲೆಗಳಲ್ಲಿ ಒಂದಾಗಿದೆ. ಸರ್ಕಾರಿ ಮತ್ತು ಖಾಸಗಿಯ ಅನೇಕ ಯೋಜನೆಗಳಿಗೆ ಆಧಾರ್ ಕಡ್ಡಾಯವಾಗಿದೆ. ಪಿಎಫ್ ಖಾತೆಯಿಂದ ಹಣ ಹಿಂಪಡೆಯಲು ಆಧಾರ್ ಅಗತ್ಯವಿದೆ.
ಆಧಾರ್ ಕಾರ್ಡನ್ನು ಎಲ್ಲ ಕಡೆ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಒಂದು ವೇಳೆ ಆಧಾರ್ ಕಾರ್ಡ್ ಕಳೆದು ಹೋದ್ರೆ 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ ಅಥವಾ ಆಧಾರ್ ಸಂಖ್ಯೆ ಸಹಾಯದಿಂದ ಆಧಾರ್ ಡೌನ್ಲೋಡ್ ಮಾಡಬಹುದು. ಒಂದು ವೇಳೆ ಆಧಾರ್ ಕಾರ್ಡ್ ಮತ್ತು ಯುಐಡಿ ಎರಡನ್ನೂ ಕಳೆದುಕೊಂಡಿದ್ದರೆ, ಎರಡನ್ನೂ ಪಡೆಯಲು ಸುಲಭ ಮಾರ್ಗವಿದೆ. ಆಧಾರ್ ಸಂಖ್ಯೆ ಅಥವಾ ಯುಐಡಿಯನ್ನು ನೀವು ಸುಲಭವಾಗಿ ಪತ್ತೆ ಮಾಡಬಹುದು.
ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ನೋಂದಾಯಿಸಲ್ಪಡುವುದು ಬಹಳ ಮುಖ್ಯ. ಮೊಬೈಲ್ ಸಂಖ್ಯೆಯು ಸಕ್ರಿಯ ಎಸ್ಎಂಎಸ್ ಸೌಲಭ್ಯವನ್ನು ಹೊಂದಿರಬೇಕು. ಇದ್ರಲ್ಲಿ ಒಟಿಪಿ ಬರುತ್ತದೆ. ಆಧಾರ್ ಪೋರ್ಟಲ್ ಪ್ರವೇಶಿಸಲು ಇಂಟರ್ನೆಟ್ ಸೌಲಭ್ಯ ಇರಬೇಕು.
ಮೊದಲು,https://resident.uidai.gov.in/ ಗೆ ಲಾಗ್ ಇನ್ ಮಾಡಿ. ಅಲ್ಲಿ MyAadhaar ಆಯ್ಕೆಯನ್ನು ಕ್ಲಿಕ್ ಮಾಡಿ. Retrieve Lost or FORGOten EID/UID ಮೇಲೆ ಸ್ಕ್ರಾಲ್ ಮಾಡಿ. UID ಅಥವಾ EID ಹಿಂಪಡೆಯಬೇಕೇ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದ ಮೇಲೆ ಹೆಸರು, ಇಮೇಲ್ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆಯಂತಹ ಮಾಹಿತಿಯನ್ನು ನಮೂದಿಸಬೇಕು.
ನಂತ್ರ ಪುಟವನ್ನು ಮರು ನಿರ್ದೇಶಿಸಲಾಗುತ್ತದೆ. ನಂತ್ರ ಕ್ಯಾಪ್ಚಾ ಕೋಡ್ ಅನ್ನು ಪರಿಶೀಲಿಸಿ ಮತ್ತು ಒಟಿಪಿ ಮೇಲೆ ಕ್ಲಿಕ್ ಮಾಡಿ. ಒಟಿಪಿ ಬಂದ್ಮೇಲೆ ಅದನ್ನು ನಮೂದಿಸಿ. ಇದಾದ ನಂತ್ರ ನಿಮ್ಮ ಆಧಾರ್ ಸಂಖ್ಯೆ ಅಥವಾ ಯುಐಡಿ, ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಗೆ ಬರಲಿದೆ.