
ಬಾವಿಗೆ ಬಿದ್ದಿದ್ದ ಗಂಡು ಚಿರತೆಯನ್ನು ಬಾವಿಯಿಂದ ಮೇಲೆತ್ತುತ್ತಿದ್ದಂತೆ ಘರ್ಜಿಸುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ಚಿರತೆಯನ್ನು ರಕ್ಷಿಸಲು ರಕ್ಷಕರು ಪಂಜರವನ್ನು ಬಾವಿಗೆ ಇಳಿಸಿದರು. ಚಿರತೆಯನ್ನು ಸೆರೆಹಿಡಿದು ಹಗ್ಗಗಳನ್ನು ಬಳಸಿ ಪಂಜರ ಸಹಿತ ಮೇಲಕ್ಕೆ ಎತ್ತಿದರು. ಅದೃಷ್ಟವಶಾತ್ ಚಿರತೆ ಬದುಕುಳಿದಿದೆ.
ಕಾಡು ಪ್ರಾಣಿಗಳು ಇಂತಹ ಅಪಾಯಕಾರಿ ಸನ್ನಿವೇಶಗಳಿಗೆ ಸಿಲುಕುವುದನ್ನು ತಡೆಯಲು ತೆರೆದ ಬಾವಿಗಳನ್ನು ಮುಚ್ಚುವಂತೆ ಐಎಫ್‌ಎಸ್ ಅಧಿಕಾರಿ ಜನರನ್ನು ವಿನಂತಿಸಿದರು. ‘ಮಹಾರಾಷ್ಟ್ರದಲ್ಲಿ ತೆರೆದ ಬಾವಿಯಿಂದ ಗಂಡು ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ಕಾಡು ಪ್ರಾಣಿಗಳಿಗೆ ಇಂತಹ ಆಘಾತವನ್ನು ತಪ್ಪಿಸಲು ದಯವಿಟ್ಟು ತೆರೆದ ಬಾವಿಗಳನ್ನು ಮುಚ್ಚಿ’ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. ಚಿರತೆಗೆ ಯಾವುದೇ ಹಾನಿಯಾಗದಂತೆ ಯಶಸ್ವಿಯಾಗಿ ರಕ್ಷಿಸಿದ ಅರಣ್ಯಾಧಿಕಾರಿಗಳ ಪ್ರಯತ್ನವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.