)
ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತ ನಂದಾ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಐಐಎಂ ಕೋಲ್ಕತಾ ಕ್ಯಾಂಪಸ್‌ನಲ್ಲಿ ಎರಡು ಸರೀಸೃಪಗಳು ಪರಸ್ಪರ ಕಾದಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಇದನ್ನು ನೋಡಿದರೆ ಭಯ ಬೀಳುವಂತಿದೆ. ಈ ಸರೀಸೃಪಗಳು ಕಾದಾಟ ಮಾಡುತ್ತಿರುವ ಸಂದರ್ಭದಲ್ಲಿ ವಿಡಿಯೋ ತೆಗೆದವರಿಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಟ್ವಿಟರ್‌ನಲ್ಲಿ ಈ ವೀಡಿಯೊ 8 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 613 ಲೈಕ್‌ಗಳನ್ನು ಸಂಗ್ರಹಿಸಿದೆ. ಸರೀಸೃಪಗಳು ಮೊಸಳೆಯೇ ಅಥವಾ ಮಾನಿಟರ್ ಹಲ್ಲಿಗಳೇ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಗೊಂದಲಕ್ಕೊಳಗಾಗಿದ್ದರು.