ದೆಹಲಿಯ ಗುರುಗ್ರಾಮ್ ಗ್ರಾಮದ ಬಳಿ ಸಂಜೆ ಕಂಡ ದೃಶ್ಯ ನೋಡಿ ಜನ ದಂಗಾಗಿ ಹೋಗಿದ್ದರು. ವಿದೇಶಿ ಪ್ರಜೆಯೊಬ್ಬ ಇಲ್ಲಿನ ರಸ್ತೆ ಮೇಲೆ ಬೆತ್ತಲೆ ಓಡೋದಕ್ಕೆ ನೋಡಿ ಶಾಕ್ ಆಗಿದ್ದರು. ತಕ್ಷಣವೇ ಪೊಲೀಸರ ಗಮನಕ್ಕೆ ತಂದ ಗ್ರಾಮಸ್ಥರು ಪೊಲೀಸರು ಬರುವ ತನಕ ಆ ವ್ಯಕ್ತಿಯನ್ನ ಮರಕ್ಕೆ ಕಟ್ಟಿ ಹಾಕಿದ್ದರು. ಈಗ ಪೊಲೀಸರ ವಿಶೇಷ ಅತಿಥಿಯಾಗಿರುವ ಆ ವ್ಯಕ್ತಿಯನ್ನ ವೈದ್ಯಕೀಯ ಪರೀಕ್ಷೆಗಾಗಿ, ಸೆಕ್ಟರ್ 10 ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈತ ನೈಜೀರಿಯನ್ ಪ್ರಜೆ ಎಂದು ಗುರುತಿಸಲಾಗಿದ್ದು, ಈಗ ಆತನ ವಿರುದ್ಧ ಪ್ರಕರಣವನ್ನ ದಾಖಲಿಸಲಾಗಿದೆ.
ಆತ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಈ ರೀತಿ ಮಾಡಿದ್ದಬೋ ಇಲ್ಲಾ ಉದ್ದೇಶಪೂರಕವಾಗಿ ಈ ರೀತಿ ಬೆತ್ತಲೆ ಓಡಿದ್ದಾನಾ ಅನ್ನೋದರ ವಿಚಾರಣೆ ಈಗ ಮಾಡಲಾಗುತ್ತಿದೆ ಎಂದು ಬಾದಶಹಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮದನ್ಲಾಲ್ ಹೇಳಿದ್ದಾರೆ.
ಅದು ಸುಮಾರು 6ಗಂಟೆಯ ಸಮಯ, ಸೆಕ್ಟರ್ 69ರ ಟುಲಿಪ್ಚೌಕ್ ಬಳಿ ನಡುರಸ್ತೆಯಲ್ಲಿ ಬೆತ್ತಲೆಯಾಗಿ ವಿದೇಶಿ ವ್ಯಕ್ತಿಯೊಬ್ಬ ಓಡುತ್ತಿದ್ದ. ಇದರಿಂದ ಅಲ್ಲಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಆ ವ್ಯಕ್ತಿ ಎಲ್ಲರಿಂದ ತಪ್ಪಿಸಿಕೊಂಡು ಓಡುವುದಕ್ಕೆ ಪ್ರಯತ್ನ ಪಟ್ಟಿದ್ದ. ತಕ್ಷಣವೇ ಆತನನ್ನ ಹಿಡಿದು ಅಲ್ಲೇ ಇದ್ದ ಮರಕ್ಕೆ ಕಟ್ಟಿಹಾಕಿ, ಪೊಲೀಸರು ಬಂದ ಮೇಲೆ ಆ ವ್ಯಕ್ತಿಯನ್ನ ಅವರಿಗೆ ಒಪ್ಪಿಸಿದ್ದಾರೆ. ಈಗ ಪೊಲೀಸರು ಆತನ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.