ಬೇಹುಗಾರಿಕೆ ಆರೋಪದ ಮೇಲೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಚಾಲಕನನ್ನು ನವದೆಹಲಿಯ ಜವಾಹರ್ ಲಾಲ್ ನೆಹರು ಭವನದಲ್ಲಿ ಇಂದು ಬಂಧಿಸಲಾಗಿದೆ. ಆತ ಪೂನಂ ಶರ್ಮಾ ಅಥವಾ ಪೂಜಾ ಎಂಬ ಮಹಿಳೆಯಂತೆ ನಟಿಸುತ್ತಿದ್ದ ಪಾಕಿಸ್ತಾನಿ ವ್ಯಕ್ತಿಗೆ ಹಣದ ವಿನಿಮಯಕ್ಕಾಗಿ ಮಾಹಿತಿ ಮತ್ತು ದಾಖಲೆಗಳನ್ನು ವರ್ಗಾಯಿಸುತ್ತಿದ್ದನು.
ಆರೋಪಿಯನ್ನು ಬಂಧಿಸಿರುವ ದೆಹಲಿ ಪೊಲೀಸರ ಅಪರಾಧ ವಿಭಾಗದ ಮೂಲಗಳು ಚಾಲಕ ಹನಿ ಟ್ರ್ಯಾಪ್ ಗೆ ಒಳಗಾಗಿದ್ದಾನೆ ಎಂದು ತಿಳಿಸಿವೆ.