ನೀವು ಮತದಾನ ಮಾಡಿದ ಬಳಿಕ ಎಂದಾದರೂ ಮತದಾನ ಪ್ರಮಾಣ ಪತ್ರ ತೆಗೆದುಕೊಂಡಿದ್ದೀರಾ ? ಅರೆ…! ಇಂತಹ ಸೌಲಭ್ಯವಿದೆಯಾ ಎಂದು ಯೋಚಿಸುತ್ತಿರಬಹುದು. ಇಂತಹ ಸೌಲಭ್ಯದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮತದಾನದ ಪ್ರಮಾಣಪತ್ರ ಪಡೆದಿದ್ದಾರೆ.
ಸಚಿವರು ಇಂದು ದೆಹಲಿಯಲ್ಲಿ ಆರನೇ ಹಂತದ ಲೋಕಸಭೆ ಚುನಾವಣೆಗೆ ಮತ ಚಲಾಯಿಸಿದರು. ತಮ್ಮ ಮತಗಟ್ಟೆಯಲ್ಲಿ ಮೊದಲು ಮತದಾನ ಮಾಡಿದ ಪುರುಷ ಮತದಾರರು ಅವರಾಗಿದ್ದು ಅವರಿಗೆ ಸ್ವೀಪ್ ಸಮಿತಿ ಮತದಾನದ ಪ್ರಮಾಣಪತ್ರ ನೀಡಿದ್ದು. ಈ ಖುಷಿಯನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಸಚಿವ ಎಸ್ ಜೈ ಶಂಕರ್ “ಈ ಬೂತ್‌ನಲ್ಲಿ ಮತ ಹಾಕಿದ ನಾನು ಮೊದಲ ಪುರುಷ ಮತದಾರನಾಗಿದ್ದೇನೆ. ದೇಶಕ್ಕೆ ಇದು ನಿರ್ಣಾಯಕ ಕ್ಷಣವಾಗಿರುವುದರಿಂದ ಜನರು ಹೊರಗೆ ಬಂದು ಮತ ಚಲಾಯಿಸಬೇಕೆಂದು ನಾವು ಬಯಸುತ್ತೇವೆ. ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ನನಗೆ ವಿಶ್ವಾಸವಿದೆ” ಎಂದು ಅವರು ಮತದಾನದ ಪ್ರಮಾಣಪತ್ರ ಹಿಡಿದು ನಿಂತಿರುವ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ.
ಇಂದು ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಎಂಟು, ದೆಹಲಿಯಲ್ಲಿ ಏಳು, ಹರಿಯಾಣದಲ್ಲಿ 10, ಜಾರ್ಖಂಡ್‌ನಲ್ಲಿ 4, ಉತ್ತರ ಪ್ರದೇಶದಲ್ಲಿ 14 ಮತ್ತು ಜಮ್ಮು ಮತ್ತು ಕಾಶ್ಮೀರದ ಅಂತಿಮ ಕ್ಷೇತ್ರವಾದ ಅನಂತನಾಗ್-ರಜೌರಿಯಲ್ಲಿ ಮತದಾನ ನಡೆಯುತ್ತಿದೆ.
ಜೂನ್ 1 ರಂದು ಕೊನೆಯ ಹಂತದ ಚುನಾವಣೆ ಮುಗಿದ ನಂತರ ಜೂನ್ 4 ರಂದು ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದೆ.