2021ರ ಸೆ.9 ರಂದು ತಾನು ಭಾರತದಲ್ಲಿ ಇನ್ಮುಂದೆ ಯಾವುದೇ ಕಾರುಗಳನ್ನು ತಯಾರಿಕೆ ಮಾಡುವುದಿಲ್ಲ ಎಂದು ಘೋಷಿಸಿ, ತನ್ನ ಘಟಕಕ್ಕೆ ‘ಫೋರ್ಡ್ ಇಂಡಿಯಾ’ ಕಂಪನಿಯು ಬೀಗ ಜಡಿಯಿತು.
ಅದಾದ ಮೇಲೆ ಹೊಸ ಫೋರ್ಡ್ ಕಾರು ಕೊಳ್ಳುವವರಿಗೆ ಉಳಿದಿರುವ ಏಕೈಕ ಆಯ್ಕೆ ಎಂದರೆ ಆಮದು ಮಾಡಿಕೊಳ್ಳುವುದು ಮಾತ್ರವೇ.
ಆದರೆ, ರಸ್ತೆಗಳಲ್ಲಿರುವ ಫೋರ್ಡ್ ಇಂಡಿಯಾ ಹೊಸ ಮಾಡೆಲ್‌ಗಳಾದ ಎಕೋಸ್ಪೋರ್ಟ್, ಎಂಡೀವರ್ ಹಾಗೂ ಹಳೆಯ ಮಾಡೆಲ್‌ಗಳಾದ ‘ಫಿಗೋ’ ಕಾರುಗಳನ್ನು ಸೆಕೆಂಡ್ ಹ್ಯಾಂಡ್ ರೂಪದಲ್ಲಿ ಕೊಳ್ಳುವವರು ಒಮ್ಮೆ ಚಿಂತಿಸಲೇಬೇಕಿದೆ.
ಅಂದರೆ, ಸೂಕ್ತ ಸರ್ವೀಸ್ ಸಿಗಲಿದೆಯೇ ? ಕಂಪನಿಯ ನೈಜ ಬಿಡಿ ಭಾಗಗಳು ಸಿಗಲಿದೆಯೇ ಎನ್ನುವಂತಹ ವಿಚಾರಗಳು ಈಗ ಚರ್ಚೆಯ ಮುನ್ನೆಲೆಗೆ ಬಂದಿವೆ.
ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಬೇಡ. ಯಾಕೆಂದರೆ, ಫೋರ್ಡ್ ಇಂಡಿಯಾ ಕಂಪನಿಯ ಪ್ರಕಟಣೆಯಂತೆ ಅವರು ಚೆನ್ನೈ, ದಿಲ್ಲಿ, ಮುಂಬಯಿ, ಕೋಲ್ಕೊತಾದಲ್ಲಿನ ಬಿಡಿ ಭಾಗಗಳ ತಯಾರಿಕೆ ಸಂಗ್ರಹಾಗಾರವನ್ನು ಮುಚ್ಚುತ್ತಿಲ್ಲ. ಇನ್ನು ಅಗತ್ಯ ವಾಹನ ಸರ್ವೀಸ್ ಕೂಡ ಕಂಪನಿ ಮೂಲಕ ಮನವಿ ಮೇರೆಗೆ ಲಭ್ಯವಿರುತ್ತದೆ. ಹಾಗಾಗಿ ಸೆಕೆಂಡ್ ಹ್ಯಾಂಡ್ ಫೋರ್ಡ್ ಕಾರು ಖರೀದಿಗೆ ಅಭ್ಯಂತರವಿಲ್ಲ.
ನೋಡನೋಡುತ್ತಿದ್ದಂತೆಯೇ ಗುಂಡಿಯಲ್ಲಿ ಮುಳುಗಿದ ಕಾರು: ಬೆಚ್ಚಿಬೀಳಿಸುವ ದೃಶ್ಯ ಕ್ಯಾಮರಾದಲ್ಲಿ ಸೆರೆ
ಇವೆಲ್ಲದರ ನಡುವೆ ಒಂದಂತೂ ನಿಜ, ದೇಶವನ್ನೇ ತೊರೆದಿರುವ ಕಂಪನಿಯ ಕಾರಿನ ಬೆಲೆಯು ಬಹಳ ಕ್ಷೀಣಿಸಲಿದೆ. ಅಮೆರಿಕದ ಮತ್ತೊಂದು ಕಾರು ತಯಾರಿಕೆ ಕ್ಷೇತ್ರದ ದೈತ್ಯ ಕಂಪನಿ ಜನರಲ್ ಮೋಟರ್ಸ್ ಕೆಲ ತಿಂಗಳ ಮುನ್ನ ದೇಶ ತೊರೆದಾಗಲೂ ಇದೇ ಆಗಿತ್ತು. ಸೆಕೆಂಡ್ ಹ್ಯಾಂಡ್ ಕಾರುಗಳ ಬೆಲೆಯಲ್ಲಿ ಭಾರಿ ಕುಸಿತ ಕಂಡುಬರಲಿದೆ.