ಕೇರಳ ಪೊಲೀಸರು ತಮ್ಮ ವಾಹನಗಳ ಪಡೆಗೆ ಫೋರ್ಸ್‌ನ ಗೂರ್ಖಾ ಎಸ್‌ಯುವಿಯನ್ನು ಸೇರಿಸಿಕೊಂಡಿದ್ದಾರೆ. ಮಹೀಂದ್ರ ಥಾರ್‌ಗೆ ಪ್ರತಿಸ್ಪರ್ಧಿಯಾಗಿರುವ ಭಾರತದ ಅತ್ಯಂತ ಸಮರ್ಥ ಆಫ್-ರೋಡರ್ ಎಸ್‌ಯುವಿಗಳಲ್ಲಿ ಗೂರ್ಖಾ ಸಹ ಒಂದಾಗಿದೆ. ಕೇರಳ ಪೊಲೀಸ್ ಪಡೆ ಫೋರ್ಸ್ ಗೂರ್ಖಾದ 44 ವಾಹನಗಳನ್ನು ಹೊಂದಲಿದೆ.
ಕೇರಳ ಪೊಲೀಸರು ಅದಾಗಲೇ ಮಹೀಂದ್ರಾ ಬೊಲೆರೊದ 72 ಎಸ್‌ಯುವಿಗಳನ್ನು ಹೊಂದಿದ್ದಾರೆ. ಈ ಕಂಪನಿಯು ಈಗಾಗಲೇ ಇಲಾಖೆಯಲ್ಲಿ ಇತರ ವಾಹನಗಳನ್ನು ಒದಗಿಸುವ ಮೂಲಕ ಹೆವಿ ಡ್ಯೂಟಿ ಕೆಲಸ ಮತ್ತು ವಿಶ್ವಾಸಾರ್ಹತೆಯಲ್ಲಿ ತನ್ನ ಕ್ಷಮತೆ ಸಾಬೀತುಪಡಿಸಿದೆ.
Big News: ಮಾರುಕಟ್ಟೆಯಲ್ಲಿ ಧಮಾಲ್ ಮಾಡಲು ಬರ್ತಿದೆ ಮಾರುತಿ ಸುಜುಕಿ ಎಲೆಕ್ಟ್ರಿಕ್ ವಾಹನ
ದೇಶದ ಪೊಲೀಸ್ ಇಲಾಖೆಯೊಂದು ಇದೇ ಮೊದಲ ಬಾರಿಗೆ ಫೋರ್ಸ್ ಗೂರ್ಖಾ ಬಳಸುತ್ತಿದೆ. ಇದಕ್ಕೂ ಮೊದಲು, ಮಹೀಂದ್ರಾ ಸ್ಕಾರ್ಪಿಯೊ, ಮಹೀಂದ್ರ ಬೊಲೆರೊ ಮತ್ತು ಟಾಟಾ ಸುಮೊದಂತಹ ಇತರ ಎಸ್‌ಯುವಿಗಳನ್ನು ರಾಜ್ಯಗಳ ಪೊಲೀಸ್ ಇಲಾಖೆಗಳು ಬಳಸುವುದನ್ನು ನೋಡಿದ್ದೇವೆ.
ಗೂರ್ಖಾ ಇತ್ತೀಚೆಗೆ ತನ್ನ ಎರಡನೇ ಪೀಳಿಗೆಯ ಮೇಲ್ದರ್ಜೆ ಪಡೆದುಕೊಂಡಿದೆ. ಸೆಪ್ಟೆಂಬರ್ 27, 2021ರಲ್ಲಿ ಲಾಂಚ್ ಆದ ಈ ವಾಹನದ ಬೆಲೆ ರೂ 13.59 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ.
ಗೂರ್ಖಾ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಕಾರ್ಯನಿರ್ವಹಿಸುವ 2.6-ಲೀಟರ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಎಂಜಿನ್ 89ಬಿಎಚ್‌ಪಿ ಮತ್ತು 250 ಎನ್‌ಎಂ ಟಾರ್ಕ್ ಶಕ್ತಿ ನೀಡುತ್ತದೆ. ಒಂದು ಸಮರ್ಥ ಆಫ್-ರೋಡರ್ ಆಗಿ, ಗೂರ್ಖಾ ಎಡಬ್ಲ್ಯೂಡಿ ವ್ಯವಸ್ಥೆಯ ಆಯ್ಕೆಯನ್ನು ಹೊಂದಿದೆ, 35 ಡಿಗ್ರಿಗಳಷ್ಟು ಕಡಿದಾದ ಇಳಿಜಾರುಗಳನ್ನು ಏರುವ ಸಾಮರ್ಥ್ಯ ಹೊಂದಿದೆ.
ಕೇರಳ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಗೂರ್ಖಾ ಮಾದರಿಗಳು ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಬೈ-ಎಲ್ಇಡಿ ಹೆಡ್ ಲ್ಯಾಂಪ್‌ಗಳೊಂದಿಗೆ 3-ಬಾಗಿಲಿನ ರೂಪಾಂತರಗಳಾಗಿವೆ. ಆಫ್-ರೋಡಿಂಗ್ ಸಾಮರ್ಥ್ಯಕ್ಕೆ ಸಹಾಯ ಮಾಡಲು ಕಪ್ಪು ಕ್ಲಾಡಿಂಗ್‌ಗಳೊಂದಿಗೆ 16-ಇಂಚಿನ ಮಿಶ್ರಲೋಹದ ಚಕ್ರಗಳನ್ನು ಈ ವಾಹನಗಳು ಪಡೆದುಕೊಂಡಿವೆ.
ಗೂರ್ಖಾ ವಿಶಿಷ್ಟವಾದ ಕ್ರಿಯಾತ್ಮಕ ಸ್ನೋರ್ಕೆಲ್ ಹೊಂದಿದ್ದು, ಇದು ನೀರಿನಲ್ಲಿ 700 ಮಿಮೀ ಆಳದವರೆಗೆ ಕಾರ್ಯನಿರ್ವಹಿಸುತ್ತದೆ. ಇದರ ಜೊತೆಗೆ, ಹಿಂಭಾಗದ ತುದಿಯಲ್ಲಿ ಹೊಸ ಟೇಲ್‌ಲೈಟ್‌ಗಳು ಮತ್ತು ಮೇಲ್ಛಾವಣಿಯ ಮೇಲೆ ಜೋಡಿಸಲಾದ ಲಗೇಜ್ ಕ್ಯಾರಿಯರ್ ಅನ್ನು ತಲುಪಲು ಏಣಿಯೊಂದನ್ನು ಅಳವಡಿಸಲಾಗಿದೆ.