alex Certify ಟೈಮೇ ಸರಿಯಿಲ್ಲ ಎನ್ನುವವರಿಗೆ ಇದೆ ʼಒಳ್ಳೆ ಟೈಮ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೈಮೇ ಸರಿಯಿಲ್ಲ ಎನ್ನುವವರಿಗೆ ಇದೆ ʼಒಳ್ಳೆ ಟೈಮ್ʼ

ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಮಾತು ಹೆಚ್ಚು ಜನಜನಿತವಾಗಿದೆ. ಅದೇ ರೀತಿಯಲ್ಲಿ ನನ್ನ ಟೈಮೇ ಸರಿ ಇಲ್ಲ ಎಂದು ಹೆಚ್ಚಿನವರು ಗೊಣಗುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ.

ಕಾಲವನ್ನು ತಡೆಯಲು ಸಾಧ್ಯವಿಲ್ಲ. ಅದು ನಿಲ್ಲುವುದೂ ಇಲ್ಲ. ನಾವೇ ಸಮಯಕ್ಕೆ ಸರಿಯಾಗಿ ಹೊಂದಾಣಿಕೆ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು.

ಟೈಮೇ ಸರಿ ಇಲ್ಲ ಎನ್ನುವವರು ಮೊದಲು ತಾವು ಸರಿಯಾಗಬೇಕು. ತಮ್ಮ ಹಿನ್ನಡೆಗೆ ಕಾರಣ ಸಮಯ ಎಂದು ಭಾವಿಸಿಕೊಳ್ಳುತ್ತಾರೆ. ನನ್ನ ಟೈಮ್ ಸರಿ ಇಲ್ಲ ಎಂದುಕೊಳ್ಳುತ್ತಾರೆ. ಆದರೆ, ಸಮಯಕ್ಕೆ ಬೆಲೆ ಕೊಡುವುದನ್ನು ಮರೆಯುತ್ತಾರೆ.

ಅದೆಲ್ಲಾ ಒಳ್ಳೆಯದಲ್ಲ, ಕಾಡು ಹರಟೆಗಾಗಿ ಕಾಲಹರಣ ಮಾಡದೇ ಇರುವ ಸಮಯವನ್ನು ಸದ್ಬಳಕೆ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಿ. ಇದರಿಂದ ಸಮಯದ ಮೌಲ್ಯವೇನೆಂದು ನಿಮಗೆ ಗೊತ್ತಾಗುತ್ತದೆ.

ವರ್ಷವಿಡೀ ಟೈಮ್ ವೇಸ್ಟ್ ಮಾಡಿ ಪರೀಕ್ಷೆ ಸಮೀಪಿಸಿದಾಗ, ಓದಲು ಕುಳಿತು ನನ್ನ ಟೈಮ್ ಸರಿ ಇಲ್ಲ ಎನ್ನುವುದಕ್ಕಿಂತ ಮೊದಲಿನಿಂದಲೂ ಟೈಮ್ ವೇಸ್ಟ್ ಮಾಡದೇ ಓದಿಕೊಳ್ಳಬೇಕು.

ವಿದ್ಯಾರ್ಥಿಗಳು ಮಾತ್ರವಲ್ಲ, ಎಲ್ಲರಿಗೂ ಇದೇ ಅನ್ವಯಿಸುತ್ತದೆ. ಹೆಚ್ಚಿನವರು ಸಮಯವನ್ನು ಸರಿಯಾಗಿ ಪಾಲಿಸುವುದೇ ಇಲ್ಲ. ಜೀವನದಲ್ಲಿ ಸಮಯ ಪಾಲನೆ ಬಹಳ ಮುಖ್ಯ ಎನ್ನುವುದನ್ನೇ ಮರೆತು ಇದ್ದ ಬದ್ದ ಟೈಮ್ ವೇಸ್ಟ್ ಮಾಡಿ ಕೊನೆಗೆ ಟೈಮೇ ಇಲ್ಲ ಎಂದು ಒದ್ದಾಡುತ್ತಾರೆ. ಅದಾಗಿ ಮರುಕ್ಷಣದಲ್ಲೇ ನನ್ನ ಟೈಮೇ ಸರಿ ಇಲ್ಲ ಎನ್ನುತ್ತಾರೆ. ಸರಿಯಾಗಿಲ್ಲದ್ದು ಟೈಮ್ ಅಲ್ಲ ನಾವೇ ಎಂದುಕೊಳ್ಳುವುದಿಲ್ಲ.

ಸಮಯಕ್ಕೆ ಬೆಲೆ ಕೊಡಬೇಕು. ಹಿಡಿದ ಕೆಲಸ ಕಾರ್ಯಗಳು ನಿಗದಿತ ಸಮಯಕ್ಕೆ ಮುಗಿಯುತ್ತವೆ. ಯಶಸ್ಸಿನ ದಾರಿಯಲ್ಲಿ ಸಾಗಬಹುದು. ಸಮಯದ ಮೌಲ್ಯ ತಿಳಿದವರಿಗೆ ಒಳ್ಳೆ ಟೈಮ್ ಇದ್ದೇ ಇರುತ್ತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...