ಬೆಳ್ಳಿ ಲೋಹವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶಾಸ್ತ್ರಗಳಲ್ಲಿ ಕೂಡ ಬಂಗಾರಕ್ಕಿಂತ ಬೆಳ್ಳಿ ಶುದ್ಧ ಲೋಹವೆಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಪೂಜೆ, ದೇವರ ಆರಾಧನೆಗೆ ಬೆಳ್ಳಿ ಪಾತ್ರೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಆಯುರ್ವೇದದಲ್ಲೂ ಬೆಳ್ಳಿಗೆ ಮಹತ್ವ ನೀಡಲಾಗಿದೆ. ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು. ಬೆಳ್ಳಿ ಪಾತ್ರೆಯಲ್ಲಿ ನೀರು ಕುಡಿಯುವುದ್ರಿಂದ ದೈಹಿಕ ಆರೋಗ್ಯ ವೃದ್ಧಿಯಾಗುವ ಜೊತೆಗೆ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಲಕ್ಷ್ಮಿ ಪ್ರಿಯ ಲೋಹ ಬೆಳ್ಳಿ. ಬೆಳ್ಳಿ ಮೇಲೆ ಚಂದ್ರನಿಗೆ ವಿಶೇಷ ಹಕ್ಕಿರುತ್ತದೆ. ಇದೇ ಕಾರಣಕ್ಕೆ ಯಾವ ಜಾತಕದ ವ್ಯಕ್ತಿಗೆ ಹೆಚ್ಚು ಕೋಪವಿರುತ್ತದೆಯೋ ಆ ವ್ಯಕ್ತಿ ಬೆಳ್ಳಿ ಧಾರಣೆ ಮಾಡಬೇಕು ಎನ್ನಲಾಗುತ್ತದೆ. ಬೆಳ್ಳಿಯಲ್ಲಿ ಚಂದ್ರನ ಪೆಂಡೆಂಟ್ ಮಾಡಿ ಧರಿಸಬೇಕು. ಇದು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮನಸ್ಸಿನ ಏಕಾಗ್ರತೆ ಹೆಚ್ಚಾಗುವ ಜೊತೆಗೆ ಸದಾ ಶಾಂತಿಯಿಂದಿರುತ್ತದೆ.
ದೇವರ ಪೂಜೆಗೆ ಬೆಳ್ಳಿ ಪಾತ್ರೆಯನ್ನೇ ಅವಶ್ಯಕವಾಗಿ ಬಳಸಬೇಕು. ಗಣೇಶ ಹಾಗೂ ಲಕ್ಷ್ಮಿ ಮೂರ್ತಿ ಬೆಳ್ಳಿಯದಾಗಿರಬೇಕು. ಬೆಳ್ಳಿ ದೇವರ ಮೂರ್ತಿ ಪೂಜೆ ಮಾಡುವುದ್ರಿಂದ ಆರ್ಥಿಕ ವೃದ್ಧಿಯಾಗುತ್ತದೆ.