ಶಾರೀರಿಕ ಸಂಬಂಧ ಸೆಕ್ಸ್ ಬಗ್ಗೆ ತಿಳಿದುಕೊಳ್ಳುವುದು ಬಹಳಷ್ಟಿದೆ. ಲೈಂಗಿಕ ಕ್ರಿಯೆ ಕೇವಲ ಸಂತೋಷವನ್ನು ಮಾತ್ರ ನೀಡುವುದಿಲ್ಲ. ಅದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಲೈಂಗಿಕ ಕ್ರಿಯೆಯಿಂದ ವಾತ ಹೆಚ್ಚಾಗುತ್ತದೆ. ಹಾಗಾಗಿ ಸಂಬಂಧ ಬೆಳೆಸುವ ಮೊದಲು ಸಮಯ, ವಾತಾವರಣ, ಆಹಾರ ಪದ್ಧತಿ ಬಗ್ಗೆಯೂ ಗಮನ ನೀಡಬೇಕಾಗುತ್ತದೆ.
ಆಯುರ್ವೇದದ ಪ್ರಕಾರ ತಡರಾತ್ರಿ ಶಾರೀರಿಕ ಸಂಬಂಧ ಬೆಳೆಸುವುದು ಸೂಕ್ತವಲ್ಲ. ಇದ್ರಿಂದ ವಾತ ಹೆಚ್ಚಾಗುತ್ತದೆ. ಆಯುರ್ವೇದದಲ್ಲಿ ಸೂರ್ಯೋದಯದ ನಂತ್ರ ಬೆಳಿಗ್ಗೆ 10 ಗಂಟೆಯೊಳಗೆ ಸಂಬಂದ ಬೆಳೆಸುವುದು ಒಳ್ಳೆಯದೆಂದು ಹೇಳಲಾಗಿದೆ. ರಾತ್ರಿ 10 ಗಂಟೆಯಿಂದ 11 ಗಂಟೆ ಸಂಬಂಧ ಬೆಳೆಸಲು ಉಪಯುಕ್ತವೆಂದು ಆಯುರ್ವೇದ ಹೇಳಿದೆ. ಈ ವೇಳೆ ಶರೀರದಲ್ಲಿ ಅತಿ ಹೆಚ್ಚು ಶಕ್ತಿಯಿರುತ್ತದೆ. ಊಟವಾದ ಮೇಲೆ 2 ಗಂಟೆ ನಂತ್ರ ಸಂಬಂಧ ಬೆಳೆಸುವುದು ಉತ್ತಮ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.
ಋತುವಿನ ಬಗ್ಗೆ ಹೇಳುವುದಾದಲ್ಲಿ ಚಳಿಗಾಲ ಹಾಗೂ ವಸಂತ ಕಾಲದ ಆರಂಭ ಶಾರೀರಿಕ ಸಂಬಂಧ ಬೆಳೆಸಲು ಒಳ್ಳೆಯ ಕಾಲ. ಕೆಲ ಭೌತಿಕ ಪರಿಸ್ಥಿತಿ ಹೊರತುಪಡಿಸಿ ಚಳಿಗಾಲದಲ್ಲಿ ವಾರಕ್ಕೆ 3-5 ಬಾರಿ ಸಂಬಂಧ ಬೆಳೆಸಬೇಕು. ಬೇಸಿಗೆ ಕಾಲ ಹಾಗೂ ಮಳೆಗಾಲದಲ್ಲಿ ದೇಹದಲ್ಲಿ ಶಕ್ತಿ ಕಡಿಮೆಯಿರುವ ಕಾರಣ ವಾರಕ್ಕೆ 1-2 ಬಾರಿ ಸಂಬಂಧ ಬೆಳೆಸಬೇಕೆಂದು ಆಯುರ್ವೇದ ಹೇಳಿದೆ.
ಸಂಬಂಧ ಬೆಳೆಸುವ ವೇಳೆ ಖಾಲಿ ಹೊಟ್ಟೆಯಲ್ಲಿರಬಾರದು. ಖಾಲಿ ಹೊಟ್ಟೆ ವಾತ ಹಾಗೂ ಪಿತ್ತವನ್ನು ಹೆಚ್ಚಿಸುತ್ತದೆ. ಈ ವೇಳೆ ಸಂಬಂಧ ಬೆಳೆಸಿದ್ರೆ ವಾತ ಮತ್ತಷ್ಟು ಹೆಚ್ಚಾಗುತ್ತದೆ. ತಲೆ ನೋವು, ವಾಂತಿ, ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. ಸಂಭೋಗಕ್ಕಿಂತ ಮೊದಲು ತುಪ್ಪ, ಅಕ್ಕಿ, ತೆಂಗಿನಕಾಯಿ ನೀರು, ಬಾದಾಮಿನಂತಹ ಆಹಾರ ಸೇವನೆ ಮಾಡಬೇಕು.