![](https://kannadadunia.com/wp-content/uploads/2020/07/pitcher-water.jpg)
ಜೀವ ನೀಡುವ ಜಲ ನೀರು. ಶರೀರಕ್ಕೆ ನೀರು ಬೇಕೇ ಬೇಕು. ವ್ಯಕ್ತಿಯ ದೇಹದಲ್ಲಿ ಶೇಕಡಾ 70ರಷ್ಟು ನೀರಿನಂಶವಿರಬೇಕು. ಇದು ಅನೇಕ ರೀತಿಯ ರೋಗಗಳನ್ನು ಹೊಡೆದೋಡಿಸುತ್ತದೆ.
ದಿನದಲ್ಲಿ ಎಷ್ಟು ಬೇಕಾದ್ರೂ ನೀರನ್ನು ನೀವು ಕುಡಿಯಿರಿ. ಆದ್ರೆ ರಾತ್ರಿ ಮಲಗುವಾಗ ಒಂದು ಗ್ಲಾಸ್ ನೀರನ್ನು ಅವಶ್ಯವಾಗಿ ಕುಡಿಯಿರಿ. ಇದ್ರಿಂದ ದೇಹದಲ್ಲಿರುವ ವಿಷಕಾರಿ ಪದಾರ್ಥಗಳು ಹೊರಗೆ ಹೋಗುತ್ತವೆ.
ರಾತ್ರಿ ಮಲಗುವ ಮೊದಲು ನೀರು ಕುಡಿಯುವುದರಿಂದ ಸುಖ ನಿದ್ರೆ ಬರುತ್ತದೆ. ನೀರು ದೇಹದ ಖನಿಜ ಹಾಗೂ ಜೀವಸತ್ವವನ್ನು ಸಮತೋಲನದಲ್ಲಿಡುತ್ತದೆ. ಮಲಗುವ ಮೊದಲು ನೀರು ಕುಡಿಯುವುದರಿಂದ ಸ್ನಾಯುಗಳಿಗೆ ಆರಾಮ ಸಿಗುತ್ತದೆ. ಇಡೀ ದಿನದ ಒತ್ತಡ ಕಡಿಮೆಯಾಗಿ ಸರಿಯಾದ ನಿದ್ರೆ ಬರುತ್ತದೆ.
ಕೊಬ್ಬು ಈಗ ಸಾಮಾನ್ಯ ಸಮಸ್ಯೆ. ತೂಕ ಇಳಿಸಿಕೊಳ್ಳಬಯಸುವವರು ರಾತ್ರಿ ಒಂದು ಗ್ಲಾಸ್ ತಣ್ಣನೆಯ ನೀರನ್ನು ಅವಶ್ಯವಾಗಿ ಕುಡಿಯಿರಿ. ಇದು ದೇಹದ ಕ್ಯಾಲೋರಿಯನ್ನು ಬರ್ನ್ ಮಾಡಲು ನೆರವಾಗುತ್ತದೆ.
ಕೆಟ್ಟ ಆಹಾರ ಪದ್ಧತಿ ಶರೀರದ ಜೀರ್ಣಶಕ್ತಿಯನ್ನು ಹಾಳು ಮಾಡುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಹೋದಲ್ಲಿ ಅನೇಕ ರೋಗಗಳು ಕಾಡಲು ಶುರುವಾಗುತ್ತವೆ. ರಾತ್ರಿ ಮಲಗುವ ಮೊದಲು ನೀರು ಕುಡಿಯುವುದ್ರಿಂದ ಜೀರ್ಣಕ್ರಿಯೆಯನ್ನು ಬಲಪಡಿಸಬಹುದು
ರಾತ್ರಿ ಮಲಗುವ ಮೊದಲು ನೀರು ಕುಡಿಯುವುದರಿಂದ ರಕ್ತ ಸಂಚಲನ ಸರಿಯಾಗುತ್ತದೆ. ಹೃದಯದವರೆಗೆ ರಕ್ತ ಸರಿಯಾಗಿ ಸಂಚರಿಸುವುದರಿಂದ ಹೃದಯ ಸಮಸ್ಯೆ ಕಾಡುವುದಿಲ್ಲ.
ಮಳೆಗಾಲದಲ್ಲಿ, ಚಳಿ ಇದ್ದಾಗ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿಯುವುದು ಉತ್ತಮ.