ಬೆಂಗಳೂರು : 2023-24ನೇ ಸಾಲಿಗೆ ರೂ. 3,542 ಕೋಟಿ ಪೂರಕ ಅಂದಾಜು ಮಂಡನೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮತದಾರರಿಗೆ ಗುರುತಿನ ಚೀಟಿ ನೀಡಲು ಮುಖ್ಯಚುನಾವಣಾ ಕಚೇರಿಗೆ ರೂ.30 ಕೋಟಿ, ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಗೆ ರೂ.14 ಕೋಟಿ, ಗ್ರಾಮ ಪಂಚಾಯತಿಗಳಲ್ಲಿ ಕೂಸಿನ ಮನೆ ( ಶಿಶು ಪಾಲನಾ ಕೇಂದ್ರ ) ಸ್ಥಾಪನೆಗೆ ರೂ.10 ಕೋಟಿ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನಕ್ಕೆ ರೂ. 2 ಕೋಟಿ, 2022-23ನೇ ಸಾಲಿನ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರ ನೀಡಲು ರೂ. 7.30 ಕೋಟಿ ಅನುದಾನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ತಗುಲುವ ವೆಚ್ಚವನ್ನು ಒಟ್ಟುಗೂಡಿಸಿ, ಪೂರಕ ಅಂದಾಜು ಮಂಡನೆ ಮಾಡಲಾಗಿದೆ.