ಒಟಿಟಿ ವೇದಿಕೆಗಳು ಸಹ ಈ ಬಾರಿಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲಿದೆ ಎಂದು ಕೇಂದ್ರ ಸರ್ಕಾರವು ಮಹತ್ವದ ಘೋಷಣೆ ಮಾಡಿದೆ.
ಈ ಮೂಲಕ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜಿ 5, ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ಸೇರಿದಂತೆ ವಿವಿಧ ಒಟಿಟಿ ವೇದಿಕೆಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.
ಇದನ್ನು ಹೊರತುಪಡಿಸಿ, ಅನುರಾಗ್ ಠಾಕೂರ್ ಈ ವರ್ಷದ ಸಮಾರಂಭದಲ್ಲಿ ಹೇಮಾ ಮಾಲಿನಿ ಹಾಗೂ ಪ್ರಸೂನ್ ಜೋಶಿಯವರಿಗೆ ವರ್ಷದ ವ್ಯಕ್ತಿತ್ವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.
ಭಾರತೀಯ ಸಿನಿಮಾ ರಂಗಕ್ಕೆ ಹೇಮಾ ಮಾಲಿನಿ ಹಾಗೂ ಪ್ರಸೂನ್ ಜೋಶಿಯವರ ಕೊಡುಗೆಗಳನ್ನು ಗಮನದಲ್ಲಿರಿಸಿ ಈ ಪ್ರಶಸ್ತಿ ಘೋಷಿಸಲಾಗಿದೆ ಎಂದು ಹೇಳಿದ್ರು. ಅನೇಕ ತಲೆಮಾರಿನ ಪ್ರೇಕ್ಷಕರನ್ನು ಈ ಇಬ್ಬರು ಕಲಾವಿದರು ಅನೇಕ ದಶಕಗಳ ಕಾಲ ರಂಜಿಸಿದ್ದಾರೆ ಎಂದು ಹೇಳಿದ್ರು.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ನವೆಂಬರ್ 20 ರಿಂದ 28 ರ ವರೆಗೆ ಗೋವಾದಲ್ಲಿ ನಡೆಯಲಿದೆ.