ವಾಹನಗಳ ಅಪಾಯದ ದೀಪಗಳ ಸರಿಯಾದ ಬಳಕೆ ಕುರಿತು ಅರಿವು ಮೂಡಿಸಲು ಮುಂದಾಗಿರುವ ಮೇಘಾಲಯದ ಶಿಲ್ಲಾಂಗ್ ಸಂಚಾರಿ ಪೊಲೀಸರು, ಈ ದೀಪಗಳ ತಪ್ಪಾದ ಬಳಕೆ ಮಾಡುವುದು ಕಂಡುಬಂದ ಚಾಲಕರಿಗೆ ಭಾರೀ ದಂಡ ವಿಧಿಸುತ್ತಿದ್ದಾರೆ.
ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ಕೆಟ್ಟುನಿಂತಿರುವ ವಾಹನಗಳಲ್ಲಿ ಈ ಅಪಾಯದ ದೀಪಗಳನ್ನು ಉರಿಸುವ ಮೂಲಕ ರಸ್ತೆಯಲ್ಲಿ ಸಾಗುವ ಇತರೆ ವಾಹನಗಳ ಚಾಲಕರಿಗೆ ಅಲರ್ಟ್ ಮಾಡಲಾಗುತ್ತದೆ. ನೀವೇನಾದರೂ ಅಪಾಯಕಾರಿ ಭಂಗಿಯಲ್ಲಿ ರಸ್ತೆಯಲ್ಲಿ ನಿಂತುಬಿಟ್ಟರೆ ಅಪಾಯದ ದೀಪ ಉರಿಸಬೇಕಾಗುತ್ತದೆ.
ಅಪ್ಪನಿಗೆ ಟ್ರಾಫಿಕ್ ನಿಯಮಗಳ ಪಾಠ ಹೇಳಿದ ಪುಟ್ಟ ಪೋರಿ
ಅಪಾಯದ ದೀಪಗಳನ್ನು ಸೂಕ್ತವಾಗಿ ಬಳಸದೇ ಇರುವ ಚಾಲಕರಿಗೆ ಮೋಟಾರು ವಾಹನ ಕಾಯಿದೆಯ 177ನೇ ವಿಧಿಯಡಿ ದಂಡ ವಿಧಿಸುವ ಸಾಧ್ಯತೆ ಇದೆ. ಈ ತಪ್ಪನ್ನು ಮೊದಲ ಬಾರಿಗೆ ಮಾಡಿದಾಗ 100 ರೂ.ಗಳು ಮತ್ತೊಮ್ಮೆ ಮಾಡಿದಾಗ 300 ರೂ.ಗಳ ದಂಡ ಬೀಳುವ ಸಾಧ್ಯತೆ ಬಗ್ಗೆ ಶಿಲ್ಲಾಂಗ್ ಸಂಚಾರಿ ಪೊಲೀಸರು ಸಂಚಾರಿಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ.