1969ರಲ್ಲಿ ಚಂದ್ರನ ಅಂಗಳದ ಮೇಲೆ ಕಾಲಿಟ್ಟಿದ್ದು ಮನುಕುಲದ ಇತಿಹಾಸದ ಮಹತ್ವದ ಮೈಲುಗಲ್ಲುಗಳಲ್ಲಿ ಒಂದಾಗಿದೆ.
ಇದೀಗ, ಇತಿಹಾಸದಲ್ಲೇ ಮೊದಲ ಬಾರಿಗೆ ನಾಸಾದ ಗಗನನೌಕೆಯೊಂದು ಸೂರ್ಯನ ವಾತಾವರಣ ಪ್ರವೇಶಿಸಲು ಯಶಸ್ವಿಯಾಗಿದೆ. ಪಾರ್ಕರ್ ಹೆಸರಿನ ಈ ಗಗನನೌಕೆ ಸೂರ್ಯನ ವಾತಾವರಣದಲ್ಲಿರುವ ಕೊರೋನಾ ಪ್ರದೇಶ ಪ್ರವೇಶಿಸಿದ್ದು, ಆಯಸ್ಕಾಂತೀಯ ಕ್ಷೇತ್ರ ಹಾಗೂ ಕೆಲವೊಂದು ವಸ್ತುಗಳ ಸ್ಯಾಂಪಲ್ ಮಾಡಲು ಯಶಸ್ವಿಯಾಗಿದೆ.
ರೈತನ ಮಗನಿಗೆ ಬರೋಬ್ಬರಿ 2.5 ಕೋಟಿ ರೂ. ಉದ್ಯೋಗದ ಆಫರ್
“ಪಾರ್ಕರ್ ಸೌರನೌಕೆ ಸೌರ ವಿಜ್ಞಾನದಲ್ಲಿ ಮಹತ್ವದ ಮೈಲುಗಲ್ಲುಗಳಲ್ಲಿ ಒಂದಾಗಿದೆ. ಚಂದ್ರನ ಮೇಲೆ ಕಾಲಿಟ್ಟಿದ್ದು ಚಂದ್ರನ ರಚನೆ ಹೇಗಾಯಿತು ಎಂದು ಅರಿಯುವಂತೆ ಮಾಡಿದರೆ, ಸೂರ್ಯನ ವಾತಾವರಣ ಮುಟ್ಟಿದ್ದು ನಮಗೆ ಅತ್ಯಂತ ಹತ್ತಿರದಲ್ಲಿ ಇರುವ ನಕ್ಷತ್ರದ ಬಗ್ಗೆ ಮಹತ್ವದ ಮಾಹಿತಿಗಳು ಮತ್ತು ಸೌರ ಮಂಡಲದ ಮೇಲೆ ಇವುಗಳ ಪರಿಣಾಮಗಳನ್ನು ಅರಿಯಲು ವಿಜ್ಞಾನಿಗಳಿಗೆ ನೆರವಾಗಲಿದೆ,” ಎಂದು ನಾಸಾದ ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.