ಬೆಂಗಳೂರು : ಜನವರಿ 13 ರಂದು ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ-2023 (K-SET-2023) ನಡೆಯಲಿದ್ದು, ಕೆಇಎ ( ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಪ್ರವೇಶಪತ್ರವನ್ನು ಬಿಡುಗಡೆ ಮಾಡಿದೆ.
ಈ ಕುರಿತಂತೆ ಪ್ರಾಧಿಕಾರ ಮಾಹಿತಿ ನೀಡಿದ್ದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ದಿನಾಂಕ 13-01-2024ರಂದು ಕೆಸೆಟ್ ಪರೀಕ್ಷೆ-2023 ಅನ್ನು ನಿಗದಿ ಪಡಿಸಲಾಗಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಿರುವಂತ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗಿದ್ದು,
https://cetonline.karnataka.gov.in/examcenter2023/Forms/hallticket.aspx ಲಿಂಕ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳುವಂತೆ ತಿಳಿಸಿದೆ.
ಕೆಸೆಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು https://cetonline.karnataka.gov.in/examcenter2023/Forms/hallticket.aspx ಲಿಂಕ್ ಕ್ಲಿಕ್ ಮಾಡಿ, ಅರ್ಜಿ ಸಲ್ಲಿಸಿದಂತ ಇಲಾಖೆ ಎಂಬಲ್ಲಿ ಕೆಸೆಟ್-2024 ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಅಭ್ಯರ್ಥಿಗಳು ಅರ್ಜಿ ಸಂಖ್ಯೆಯನ್ನು ನಮೂದಿಸಿಬೇಕು. ಬಳಿಕ ಅಭ್ಯರ್ಥಿಯ ಹೆಸರು (ಮೊದಲ ನಾಲ್ಕು ಅಕ್ಷರಗಳು) ಅನ್ನು ನಮೂದಿಸಿಬೇಕು. ನಂತರ ಸಬ್ ಮಿಟ್ ಬಟನ್ ಕ್ಲಿಕ್ ಮಾಡಿದ್ರೆ ನಿಮ್ಮ ಪ್ರವೇಶ ಪತ್ರ ಡೌನ್ ಲೋಡ್ ಆಗಲಿದೆ.
ಮೊದಲು ದಿನಾಂಕ 31-12-2023 (ಭಾನುವಾರ)ರಂದು ನಿಗದಿಗೊಳಿಸಿದ್ದ ಪರೀಕ್ಷಾ ದಿನಾಂಕವನ್ನು ಪರಿಷ್ಕರಿಸಿ, ನಂತರ ದಿನಾಂಕ 13-01-2024 (ಶನಿವಾರ) ರಂದು ನಡೆಸಲು ಪರಿಷ್ಕೃತ ದಿನಾಂಕ ನಿಗದಿ ಮಾಡಿತ್ತು, ಕೆಸೆಟ್ ಪರೀಕ್ಷೆ ಯ ಪತ್ರಿಕೆ-1 ಪರೀಕ್ಷೆಯನ್ನು 100 ಅಂಕಗಳಿಗೆ, ಪತ್ರಿಕೆ-2 ಪರೀಕ್ಷೆಯನ್ನು 200 ಅಂಕಗಳಿಗೆ ನಡೆಸಲಾಗುತ್ತದೆ.
ಕೆ-ಸೆಟ್ ಪರೀಕ್ಷೆಯನ್ನು ಜನವರಿ 13, 2024 ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದು. ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಎರಡೂ ಪತ್ರಿಕೆಗಳು ವಸ್ತುನಿಷ್ಠ ಮಾದರಿಯ ಬಹು ಆಯ್ಕೆ ಪ್ರಶ್ನೆಗಳನ್ನು (ಎಂಸಿಕ್ಯೂ) ಮಾತ್ರ ಒಳಗೊಂಡಿರುತ್ತವೆ. ಅಭ್ಯರ್ಥಿಯು ಪೇಪರ್ -1 ಮತ್ತು ಪೇಪರ್ -2 ರ ಪ್ರಶ್ನೆಗಳಿಗೆ ಉತ್ತರಗಳನ್ನು ಪರೀಕ್ಷಾ ಕಿರುಪುಸ್ತಕದೊಂದಿಗೆ ಒದಗಿಸಲಾದ ಆಪ್ಟಿಕಲ್ ಮಾರ್ಕ್ಸ್ ರೀಡರ್ (ಒಎಂಆರ್) ಶೀಟ್ ನಲ್ಲಿ ಗುರುತಿಸಬೇಕಾಗುತ್ತದೆ.