ತುಮಕೂರು: ಉದ್ಯೋಗಾಂಕ್ಷಿಗಳ ಗಮನಕ್ಕೆ ಅ.25 ರಿಂದ 31 ರವರೆಗೆ ತುಮಕೂರಿನಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದ್ದು, ಆಸಕ್ತರು ಭಾಗಿಯಾಗಬಹುದಾಗಿದೆ.
ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಮತ್ತು ಥರ್ಮೋವ್ಯಾಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಹಭಾಗಿತ್ವದಲ್ಲಿ ಉದ್ಯೋಗ ಮೇಳ ನಡೆಯಲಿದೆ.
ಅ. 31 ರವರೆಗೆ ಬೆಳಿಗ್ಗೆ 10.30 ಗಂಟೆಯಿಂದ ನೇರ ಸಂದರ್ಶನ ನಡೆಯಲಿದ್ದು, ಐ.ಟಿ.ಐ. ಡಿಪ್ಲೊಮಾ (ಮೆಕಾನಿಕಲ್) ಪಾಸಾದ ಯಾವುದೇ ಅಭ್ಯರ್ಥಿಯು ತಮ್ಮ ಬಯೋಡೇಟಾದೊಂದಿಗೆ ಪ್ಲಾಟ್ ನಂ.548 ಸೋಂಪುರ, 2ನೇ ಸ್ಟೇಜ್, ಬೀರಗೊಂಡನಹಳ್ಳಿ, ತ್ಯಾಮಗೊಂಡ್ಲು ನೆಲಮಂಗಲ ಇಲ್ಲಿಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0816-22784488, 9606036318 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.