ಬೆಂಗಳೂರು : ‘ಚಂದ್ರಯಾನ -3’ ಲ್ಯಾಂಡಿಂಗ್ ಗೆ ಕ್ಷಣಗಣನೆ ಆರಂಭವಾಗಿದ್ದು, ಬೆಂಗಳೂರಿನ ನೆಹರು ತಾರಾಲಯದಲ್ಲಿ ಚಂದ್ರಯಾನ -3’ ಲ್ಯಾಂಡಿಂಗ್ ಲೈವ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಇಂದು ಸಂಜೆ 5 ಗಂಟೆ 10 ನಿಮಿಷಕ್ಕೆ ಚಂದ್ರಯಾನ-3 ಲೈವ್ ಆರಂಭವಾಗಲಿದೆ. ದೊಡ್ಡ LED ಸ್ಕ್ರೀನ್ನಲ್ಲಿ ಸಾಫ್ಟ್ ಲ್ಯಾಂಡಿಂಗ್ ಲೈವ್ ವೀಕ್ಷಿಸಬಹುದು. ಮೊದಲು ಬೆಂಗಳೂರಿನ ಬಳ್ಳಾಲದ ಇಸ್ರೋಗೆ ಮಾಹಿತಿ ಬರುತ್ತೆ. ಬಳಿಕ ವಿಜ್ಞಾನಿಗಳು ಟ್ರ್ಯಾಕಿಂಗ್ ಸೆಂಟರ್ನಲ್ಲಿ ಮಾಹಿತಿ ಪಡೆಯುತ್ತಾರೆ. ನಂತರ ನೆಹರು ತಾರಾಲಯದಲ್ಲಿ ಲೈವ್ ಆರಂಭವಾಗುತ್ತದೆ ಎಂದು ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಗಲಗಲಿ ಹೇಳಿದ್ದಾರೆ.
ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಗೆ ಕ್ಷಣಗಣನೆಯಾಗಿದ್ದು, ರಾಜ್ಯದೆಲ್ಲೆಡೆ ಹೋಮ ಹವನ, ಪ್ರಾರ್ಥನೆ ಜೋರಾಗಿದೆ. ಚಂದ್ರಯಾನ-3 ಯಶಸ್ವಿಯಾಗಲೆಂದು ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಭಾರತದ ಚಂದ್ರಯಾನ-3 ಬಹಳ ವಿಶೇಷ ಹಂತವನ್ನು ತಲುಪಲಿದೆ. ಆಗಸ್ಟ್ 23, 2023 ರ ಬುಧವಾರ ಇಂದು ಸಂಜೆ 6.30 ಕ್ಕೆ ಭಾರತದ ಚಂದ್ರಯಾನ 3 ಚಂದ್ರನ ಮೇಲೆ ಇಳಿಯಲಿದೆ. ಚಂದ್ರಯಾನ-3 ಯಶಸ್ವಿಗಾಗಿ ಕೋಟ್ಯಾಂತರ ಜನ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.