ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ ಯು.ಯು. ಲಲಿತ್ ಶನಿವಾರ ಪ್ರಮಾಣ ವಚನ ಸ್ವೀಕರಿಸಿದಾಗ ಹೊಸದೊಂದು ದಾಖಲೆಯಾಗಿದೆ.
ನ್ಯಾ.ಯು.ಯು ಲಲಿತ್ ಅವರ ಅಜ್ಜ ರಂಗನಾಥ್ ಲಲಿತ್ ಸೊಲ್ಲಾಪುರದಲ್ಲಿ ಭಾರತ ಸ್ವತಂತ್ರವಾಗುವುದಕ್ಕೆ ಮುಂಚೆಯೇ ವಕೀಲರಾಗಿದ್ದರು. ಇದೀಗ ಮುಖ್ಯ ನಾಯಮೂರ್ತಿಯಾಗುವ ಮೂಲಕ ಅವರ ಕುಟುಂಬ ಪರಂಪರೆಯನ್ನು ಮುಂದೆ ತೆಗೆದುಕೊಂಡುಹೋಗಿದ್ದು, ಅದು ನೂರು ವರ್ಷವಾಗುತ್ತಿದೆ ಎಂಬುದು ವಿಶೇಷ.
ನ್ಯಾ.ಯು.ಯು ಲಲಿತ್ ಅವರ ತಂದೆ -ಕೂಡ ಹೈಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಸ್ವೀಕಾರದ ನಂತರ ನ್ಯಾಯಮೂರ್ತಿ ಲಲಿತ್ ಅವರು 90 ವರ್ಷದ ತಂದೆ ಉಮೇಶ್ ರಂಗನಾಥ್ ಲಲಿತ್ ಅವರ ಪಾದಗಳನ್ನು ಸ್ಪರ್ಶಿಸಿದ್ದು ಎಲ್ಲರ ಗಮನ ಸೆಳೆಯಿತು. ಉಮೇಶ್ ಅವರು ತವರು ಮಹಾರಾಷ್ಟ್ರದಲ್ಲಿ ವಕೀಲರಾಗಿದ್ದರು.
ನೊಯ್ಡಾದಲ್ಲಿ ಶಾಲೆಯನ್ನು ನಡೆಸುತ್ತಿರುವ ನ್ಯಾಯಮೂರ್ತಿ ಲಲಿತ್ ಅವರ ಪತ್ನಿ ಅಮಿತಾ ಲಲಿತ್, ಇಬ್ಬರು ಪುತ್ರರಾದ ಹರ್ಷದ್ ಮತ್ತು ಶ್ರೀಯಶ್ ಸಹ ಶನಿವಾರದ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಸಾಲಲ್ಲಿ ಉಪಸ್ಥಿತರಿದ್ದರು. ಪುತ್ರರಿಬ್ಬರೂ ಇಂಜಿನಿಯರಿಂಗ್ ಓದಿದ್ದರೆ, ಶ್ರೀಯಶ್ ಲಲಿತ್ ಕಾನೂನು ಪದವಿಯನ್ನೂ ಸಹ ಪಡೆದಿದ್ದು, ಅವರ ಪತ್ನಿ ರವೀನಾ ಕೂಡ ವಕೀಲೆ.
ಹೊಸ ಸಿಜೆಐ 74 ದಿನಗಳ ಅಧಿಕಾರಾವಧಿಯನ್ನು ಹೊಂದಿದ್ದು, ನವೆಂಬರ್ 8 ರಂದು 65 ವರ್ಷ ತಲುಪುತ್ತಿದ್ದಂತೆ ಅಧಿಕಾರವನ್ನು ತ್ಯಜಿಸುತ್ತಾರೆ. ಅವರು 100 ದಿನಗಳಿಗಿಂತ ಕಡಿಮೆ ಅವಧಿ ಹೊಂದಿರುವ ಸಿಜೆಐ ಆಗಿದ್ದಾರೆ.
ನ್ಯಾಯಮೂತಿರ್ ಡಿ.ವೈ. ಚಂದ್ರಚೂಡ್ ಅವರು ನ್ಯಾಯಮೂರ್ತಿ ಲಲಿತ್ ನಂತರ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದು, ಮುಖ್ಯ ನ್ಯಾಯಮೂರ್ತಿಯಾಗಲು ನಂತರದ ಸರತಿಯಲ್ಲಿದ್ದಾರೆ.