ಬೆಂಗಳೂರು : ನನಗೆ , ಗೃಹ ಸಚಿವರಿಗೆ ಯಾವುದೇ ಝೀರೋ ಟ್ರಾಫಿಕ್ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಇಂದು ಐಪಿಎಸ್ ಅಧಿಕಾರಿಗಳ ಜೊತೆ ನಡೆದ ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ನನಗೆ ಹಾಗೂ ಗೃಹ ಸಚಿವರಿಗೆ ಯಾವುದೇ ಝೀರೋ ಟ್ರಾಫಿಕ್ ಇಲ್ಲ ಎಂದರು. ಟ್ರಾಫಿಕ್ ಗೆ ತೊಂದರೆಯಾದಾಗ ಸ್ಥಳದಲ್ಲಿ ಪೊಲೀಸರು ಇರಬೇಕು. ಪೊಲೀಸರು ಮನಸ್ಸು ಮಾಡಿದರೆ ಅಪರಾಧ ತಡೆಗಟ್ಟುವುದು ಕಷ್ಟವೇನಲ್ಲ ಎಂದರು.
ಪೊಲೀಸರಿಗೆ ಗನ್ ಗಳನ್ನು ಕೊಟ್ಟಿರುವುದು ಏಕೆ ? ರೌಡಿಗಳಿಗೆ ಪೊಲೀಸ್ ಭಯ ಇರಬೇಕು ಎಂದು ಎಚ್ಚರಿಸಿದರು. ಕೆಲವು ಪೊಲೀಸರಿಗೆ ಇ-ಬೀಟ್ ವ್ಯವಸ್ಥೆ ಜಾರಿಯಲ್ಲಿರುವುದೇ ಗೊತ್ತಿಲ್ಲ ಎಂದರೆ ನಾಚಿಕೆಗೇಡು. ಇದನ್ನು ಸರಿಪಡಿಸಿಕೊಳ್ಳಿ ಎಂದು ಇದೇ ವೇಳೆ ಸಲಹೆ ನೀಡಿದರು.ಇಸ್ಪೀಟ್, ಬೆಟ್ಟಿಂಗ್, ಡ್ರಗ್ಸ್ ಗಳನ್ನು ನಿಲ್ಲಿಸದಿದ್ದರೆ SP ಮತ್ತು IG ಮಟ್ಟದ ಅಧಿಕಾರಿಗಳನ್ನೂ ನೇರ ಹೊಣೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಫೇಕ್ ನ್ಯೂಸ್ ಪ್ರಸಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಡ್ರಗ್ಸ್ ದಂಧೆಗೆ ಸಂಪೂರ್ಣ ಕಡಿವಾಣ ಹಾಕಬೇಕು, ಬೀಟ್ ವ್ಯವಸ್ಥೆ ಹಾಗೂ ಸಂಚಾರ ವ್ಯವಸ್ಥೆ ಸರಿಯಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.