ಬ್ಯಾಂಕ್ ಖಾತೆಯಲ್ಲಿ ಕೋಟ್ಯಾಂತರ ರೂಪಾಯಿಯ ಉಳಿತಾಯ ಹೊಂದಿರಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ? ಆದರೆ ಮಧ್ಯಮ ವರ್ಗದ ಮಂದಿಗೆ ಉಳಿತಾಯ ಎನ್ನುವುದು ಒಂದು ರೀತಿಯ ಹಗ್ಗದ ಮೇಲಿನ ನಡಿಗೆಯೇ ಸರಿ.
ವ್ಯವಸ್ಥಿತವಾದ ಹೂಡಿಕೆ ಯೋಜನೆ (ಎಸ್‌ಐಪಿ) ಒಂದರ ಮೂಲಕ ಮ್ಯೂಚುವಲ್ ಫಂಡ್ಸ್ ಮೇಲೆ ಹೂಡಿಕೆ ಮಾಡಿ ಕೋಟ್ಯಾಧೀಶರಾಗುವ ಐಡಿಯಾ ಒಂದನ್ನು ನಾವಿಲ್ಲಿ ಹೇಳಹೊರಟಿದ್ದೇವೆ. ಈ ಪ್ಲಾನ್ ಅಡಿ ನೀವು ದಿನವೂ 20 ರೂಪಾಯಿ ಹೂಡುತ್ತಾ ಹೋದರೆ ನಿವೃತ್ತಿಯಾಗುವ ವಯಸ್ಸಿಗೆ ಕೋಟ್ಯಂತರ ರೂಪಾಯಿ ಉಳಿಕೆ ಮಾಡಿರಬಹುದು.
20ನೇ ವಯಸ್ಸಿನಿಂದಲೇ ಪ್ರತಿದಿನ 20 ರೂಪಾಯಿ ಉಳಿತಾಯ ಮಾಡುತ್ತಾ ಸಾಗಿದಲ್ಲಿ, ಪ್ರತಿ ತಿಂಗಳು ಈ ದುಡ್ಡು 600 ರೂ.ನಷ್ಟಾಗುತ್ತದೆ. ಇದೇ ಹೂಡಿಕೆಯನ್ನು ನೀವು 40 ವರ್ಷಗಳ ಕಾಲ ಮುಂದುವರೆಸಿದಲ್ಲಿ, ಅಂದರೆ 480 ತಿಂಗಳ ಕಾಲ, ವಾರ್ಷಿಕ 15%ನಷ್ಟು ರಿಟರ್ನ್ಸ್ ಲೆಕ್ಕಾಚಾರವನ್ನೂ ಸೇರಿಸಿಕೊಂಡು ನಿಮಗೆ ಒಟ್ಟಾರೆ 1.88 ಕೋಟಿ ರೂಪಾಯಿಗಳು ಸಿಗಲಿವೆ.
ಇಷ್ಟೂ ಅವಧಿಯಲ್ಲಿ ನೀವು ಒಟ್ಟಾರೆಯಾಗಿ 2.88 ಲಕ್ಷ ರೂಪಾಯಿಗಳನ್ನು ಹೂಡಿರುತ್ತೀರಿ ಅಷ್ಟೇ. ನಿಮಗೆ ಮಾಸಿಕ 600 ರೂ.ಗಳ ಎಸ್‌ಐಪಿ ಮೇಲೆ 20% ರಿಟರ್ನ್ಸ್ ಸಿಕ್ಕಲ್ಲಿ, 40 ವರ್ಷಗಳ ಬಳಿಕ ಆ ದುಡ್ಡು 1.21 ಕೋಟಿ ರೂ.ಗಳಾಗಿ ಬೆಳೆದಿರಬಲ್ಲದು.
ಇದಲ್ಲದೇ, ನೀವು ನಿಮ್ಮ 20ನೇ ವಯಸ್ಸಿನಿಂದಲೇ ಪ್ರತಿನಿತ್ಯ 30 ರೂ.ಗಳನ್ನು ಉಳಿತಾಯ ಮಾಡುತ್ತಾ ಬಂದಲ್ಲಿ, 900 ರೂ./ತಿಂಗಳಿನಂತೆ ಈ ದುಡ್ಡು 40 ವರ್ಷಗಳ ಬಳಿಕ, ವಾರ್ಷಿಕ 12% ರಿಟರ್ನ್ಸ್ ದರದಲ್ಲಿ 1.07 ಕೋಟಿ ರೂಪಾಯಿಯಾಗಿ ಬೆಳೆಯಲಿದೆ. ಈ ಅವಧಿಯಲ್ಲಿ ನೀವು ಒಟ್ಟಾರೆ 4.32 ಲಕ್ಷ ರೂ.ಗಳ ಹೂಡಿಕೆ ಮಾಡಿರುತ್ತೀರಿ.
ಚಕ್ರ ಬಡ್ಡಿಗಳ ಪರಿಣಾಮದಿಂದಾಗಿ ಸುದೀರ್ಘಾವಧಿಗೆ ಮಾಡುವ ಸಣ್ಣ ಉಳಿತಾಯಗಳು ಬೃಹತ್ ಮೊತ್ತಗಳಾಗಿ ಬೆಳೆಯಬಲ್ಲವು. ಆದರೆ ಮ್ಯೂಚುವಲ್ ಫಂಡ್‌ಗಳ ಮೇಲೆ ಹೂಡಿಕೆ ಮಾಡುವ ಮುನ್ನ ನೀವು ಮಾರುಕಟ್ಟೆ ತಜ್ಞರಿಂದ ಸಲಹೆ ಪಡೆಯುವುದನ್ನು ಮರೆಯಬೇಡಿ.