ಪತಿ, ಪತ್ನಿ ಸಾಮರಸ್ಯದಿಂದ ಬಾಳಿದರೆ ಜೀವನದಲ್ಲಿ ಸಂತೃಪ್ತಿ ಇರುತ್ತದೆ. ದಾಂಪತ್ಯದಲ್ಲಿ ವಿರಸ ಮೂಡಿದರೆ ಕುಟುಂಬಕ್ಕೆ ಹಾನಿ ಖಂಡಿತ ಎನ್ನುವುದು ಸಾಮಾನ್ಯ ವಿಚಾರ. ಇದು ಗೊತ್ತಿದ್ದರೂ ಬಹುತೇಕ ದಂಪತಿ ಕಲಹದಲ್ಲೇ ಸಮಯ ಕಳೆಯುತ್ತಾರೆ. ಸದಾ ಕಲಹದಲ್ಲೇ ಕಾಲಕಳೆದಲ್ಲಿ ದಂಪತಿಗಳ ನಡುವೆ ವಿರಸ ಜಾಸ್ತಿಯಾಗುತ್ತದೆ.
ಕೆಲಸದ ಒತ್ತಡ, ಮಕ್ಕಳ ಪಾಲನೆ, ಕೌಟುಂಬಿಕ ವಿಚಾರ, ಹಣಕಾಸು ಮೊದಲಾದ ಕಾರಣಗಳಿಂದ ದಂಪತಿ ನಡುವೆ ಮಾತಿಗೆ ಮಾತು ಬೆಳೆಯುತ್ತದೆ. ಅದನ್ನು ನಿಲ್ಲಿಸಲು ಯಾರಾದರೊಬ್ಬರು ಪ್ರಯತ್ನಿಸಬೇಕು. ಯಾರೂ ಸೋಲದೇ ಮಾತನಾಡುತ್ತಾ ಹೋದರೆ, ಅದು ಮತ್ತೊಂದು ಹಂತ ತಲುಪುತ್ತದೆ.
ಇನ್ನು ಸಂಗಾತಿಗಳ ನಡುವೆ ಅನ್ಯೋನ್ಯತೆ ಮುಖ್ಯ. ಇದರಿಂದ ಒಳ್ಳೆಯ ಕುಟುಂಬವನ್ನು ಹೊಂದಬಹುದು. ಪರಸ್ಪರ ನಂಬಿಕೆ ಇಬ್ಬರಲ್ಲಿಯೂ ಇರಬೇಕು. ಸರಿ ತಪ್ಪಿನ ವಿವೇಚನೆ ಇರಬೇಕು. ತಾಳ್ಮೆಯ ಗುಣ ಹೊಂದಬೇಕು. ಸಂಗಾತಿಗಳಲ್ಲಿ ಕ್ಷಮಾ ಗುಣವಿರಬೇಕು.
ಒಬ್ಬರು ಹೇಳಿದ್ದನ್ನು ಕೇಳಿಸಿಕೊಳ್ಳುವ ತಾಳ್ಮೆ ಇದ್ದರೆ ಕುಟುಂಬದಲ್ಲಿ ನೆಮ್ಮದಿ. ಎಲ್ಲಕ್ಕಿಂತ ಮುಖ್ಯವಾಗಿ ಸಂಬಂಧವನ್ನು ಸುಂದರವಾಗಿ ಇಡುತ್ತದೆ. ಯಾವುದೇ ಅನುಮಾನ, ಗೊಂದಲಗಳು ಇದ್ದಲ್ಲಿ ಪರಸ್ಪರ ಚರ್ಚಿಸಿ ಅವುಗಳನ್ನು ಬಗೆಹರಿಸಿಕೊಳ್ಳಬೇಕು. ಇದರಿಂದ ಆತ್ಮೀಯತೆ, ನಂಬಿಕೆ ಜಾಸ್ತಿಯಾಗುತ್ತದೆ ಎನ್ನಲಾಗಿದೆ.