ಸನಾತನ ಸಂಪ್ರದಾಯದಲ್ಲಿ, ಉಪವಾಸ, ಪೂಜೆ, ಜಪ ಇತ್ಯಾದಿಗಳಿಗೆ ಮಹತ್ವದ ಸ್ಥಾನವಿದೆ. ಉಪವಾಸ ಮತ್ತು ದಾನದ ಸಂಪ್ರದಾಯವು ವಿಶ್ವದ ಇತರ ಧರ್ಮಗಳಲ್ಲಿಯೂ ಕಂಡು ಬರುತ್ತದೆ. ಕೆಲವರು ನಂಬಿಕೆಯಿಂದಾಗಿ ಉಪವಾಸ, ದಾನ ಮಾಡುತ್ತಾರೆ. ಮತ್ತೆ ಕೆಲವರು ಉತ್ತಮ ಆರೋಗ್ಯಕ್ಕಾಗಿ ಮಾಡ್ತಾರೆ. ಮಾನಸಿಕ ಶಾಂತಿ ಮತ್ತು ಬಯಕೆಯ ಈಡೇರಿಕೆಗಾಗಿ ಮಾಡ್ತಾರೆ. ಉಪವಾಸ ಆರಾಧ್ಯ ದೇವರನ್ನು ಮೆಚ್ಚಿಸುವ ಜೊತೆಗೆ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸನಾತನ ಧರ್ಮದಲ್ಲಿ ವಾರಕ್ಕೆ ತಕ್ಕಂತೆ ವೃತ ಮಾಡಲಾಗುತ್ತದೆ.
ಭಾನುವಾರ ಉಪವಾಸ ಸೂರ್ಯನಿಗೆ ಅರ್ಪಿತವಾಗಿದೆ. ರೋಗ, ದುಃಖ ಮತ್ತು ಶತ್ರು ಭಯವನ್ನು ತೆಗೆದು ಹಾಕುತ್ತದೆ. ಸಂತೋಷ ಮತ್ತು ಸಮೃದ್ಧಿ ನೀಡುತ್ತದೆ.
ಸೋಮವಾರ ಉಪವಾಸ ಚಂದ್ರ ದೇವನಿಗೆ ಅರ್ಪಿತವಾಗಿದೆ. ಇದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷ, ವ್ಯವಹಾರದಲ್ಲಿ ಲಾಭ ಪ್ರಾಪ್ತಿಯಾಗುತ್ತದೆ.
ಮಂಗಳವಾರದ ಉಪವಾಸ ಮಂಗಳ ದೇವತೆಯ ಆಶೀರ್ವಾದ ಪಡೆಯಲು ಆಚರಿಸಲಾಗುತ್ತದೆ. ಶತ್ರುಗಳ ಮೇಲೆ ಜಯ, ಮಗನ ಸಾಧನೆ, ವಾಹನ ಇತ್ಯಾದಿಗಳನ್ನು ಪಡೆಯಲು ಇದು ನೆರವಾಗುತ್ತದೆ.
ಬುಧವಾರ ವ್ಯವಹಾರದಲ್ಲಿ ಪ್ರಯೋಜನಗಳನ್ನು ಪಡೆಯಲು, ಬುದ್ಧಿ ವೃದ್ಧಿಗೆ, ಮಕ್ಕಳ ಸಾಧನೆಗೆ, ಕೆಲಸಗಳಲ್ಲಿ ಪ್ರಗತಿ ಸಾಧಿಸಲು ಉಪವಾಸ ಮಾಡಲಾಗುತ್ತದೆ. ಯಾವುದೇ ತಿಂಗಳ ಮೊದಲ ಬುಧವಾರದಿಂದ ಅಥವಾ ಶುಕ್ಲಪಕ್ಷದ ಮೊದಲ ಬುಧವಾರದಿಂದ ಉಪವಾಸ ಪ್ರಾರಂಭವಾಗಬೇಕು.
ಗುರುವಾರ ಉಪವಾಸ ದೇವಗುರು ಬೃಹಸ್ಪತಿಯ ಆಶೀರ್ವಾದ ಪಡೆಯಲು ಮಾಡಲಾಗುತ್ತದೆ. ಜ್ಞಾನ, ಗೌರವ ಮತ್ತು ಸಂಪತ್ತು ಪ್ರಾಪ್ತಿಯಾಗುತ್ತದೆ.
ಜೀವನದ ಎಲ್ಲಾ ರೀತಿಯ ದೈಹಿಕ, ವೈವಾಹಿಕ ಮತ್ತು ಕಲೆ ಇತ್ಯಾದಿಗಳನ್ನು ಶುಕ್ರ ಕೃಪೆಯಿಂದ ಪಡೆಯಲಾಗುತ್ತದೆ. ಈ ಎಲ್ಲಾ ಆಸೆಗಳನ್ನು ಪೂರೈಸಲು ಶುಕ್ರವಾರ ಉಪವಾಸ ಮಾಡಬೇಕು. ಯಾವುದೇ ತಿಂಗಳ ಮೊದಲ ಶುಕ್ರವಾರದಿಂದ ಅಥವಾ ಶುಕ್ಲಪಕ್ಷದ ಮೊದಲ ಶುಕ್ರವಾರದಿಂದ ಪ್ರಾರಂಭಿಸಬಹುದು.
ಶತ್ರುಗಳು ಮತ್ತು ವಿಪತ್ತುಗಳಿಂದ ರಕ್ಷಿಸಲು, ಚಿಕ್ಕ ವಯಸ್ಸಿನಲ್ಲಿ ಸಾವಿನಿಂದ ರಕ್ಷಿಸಲು, ಕಬ್ಬಿಣ, ಯಂತ್ರಗಳಿಂದ ಹೆಚ್ಚು ಉಪಯೋಗ ಪಡೆಯಲು ಶನಿವಾರ ಉಪವಾಸ ಮಾಡಬೇಕು. ಶನಿವಾರದ ಉಪವಾಸವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಶನಿ ದೇವರಿಗೆ ಇದನ್ನು ಸಮರ್ಪಿಸಲಾಗಿದೆ.