ಕೇಂದ್ರ ಸರ್ಕಾರವು ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್-2022ರ ಕರಡು ಮಸೂದೆಯನ್ನು ಜಾರಿಗೆ ತಂದಿದ್ದು, ಇದೇ ಮೊದಲ ಬಾರಿಗೆ “ಅವಳು” ಮತ್ತು “ಅವಳ” ಎಂಬ ಸರ್ವನಾಮಗಳನ್ನು ಬಳಸಲಾಗಿದೆ. ಲಿಂಗವನ್ನು ಲೆಕ್ಕಿಸದೆ ಈ ಸರ್ವನಾಮಗಳ ವಿಶೇಷ ಬಳಕೆಯನ್ನು ಭಾರತದ ಶಾಸಕಾಂಗ ಇತಿಹಾಸದಲ್ಲಿ ಮೊದಲ ಬಾರಿಗೆ ಮಾಡಲಾಗಿದೆ.
ಇಲ್ಲಿಯವರೆಗೆ ಸ್ತ್ರೀಲಿಂಗದ ಪದ ಬಳಕೆಯಲ್ಲಿ ಇರಲಿಲ್ಲ.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ಈ ವರ್ಷದ ಆಗಸ್ಟ್‌ನಲ್ಲಿ ಸರ್ಕಾರದಿಂದ ಹಿಂತೆಗೆದುಕೊಂಡ ಡೇಟಾ ಸಂರಕ್ಷಣಾ ಮಸೂದೆಯ ಬದಲಿಗೆ ಈ ಹೊಸ ಪ್ರಸ್ತಾವಿತ ಮಸೂದೆಯು ಬಂದಿರುವುದಾಗಿ ಅವರು ಹೇಳಿದ್ದಾರೆ.
“.. “ಅವಳ” ಮತ್ತು “ಅವಳು” ಎಂಬ ಸರ್ವನಾಮಗಳನ್ನು ಒಬ್ಬ ವ್ಯಕ್ತಿಗೆ ಲಿಂಗವನ್ನು ಲೆಕ್ಕಿಸದೆ ಬಳಸಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ. ಅಶ್ವಿನಿ ವೈಷ್ಣವ್ ಅವರು ಕರಡು ಮಸೂದೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಉದ್ದೇಶಿತ ಕಾನೂನಿನ ಬಗ್ಗೆ ಅಭಿಪ್ರಾಯ ಕೇಳಿದ್ದಾರೆ. ಮಸೂದೆಯು ಕಾನೂನಾದರೆ, ಇದು ಭಾರತದ ಪ್ರದೇಶದೊಳಗೆ ಡಿಜಿಟಲ್ ವೈಯಕ್ತಿಕ ಡೇಟಾದ ಪ್ರಕ್ರಿಯೆಗೆ ಅನ್ವಯಿಸುತ್ತದೆ.