ಸಮೀಕ್ಷೆಯೊಂದು ನೀಡಿರುವ ಮಾಹಿತಿಯ ಪ್ರಕಾರ ಮಕ್ಕಳಲ್ಲಿ ಉಂಟಾದ ಕಣ್ಣಿನ ಗಾಯಗಳಲ್ಲಿ 45 ಪ್ರತಿಶತ ಮನೆಯಲ್ಲಿಯೇ ಸಂಭವಿಸುತ್ತದೆ. ಮಾತ್ರವಲ್ಲದೇ ಇದರಲ್ಲಿ 10 ಪ್ರತಿಶತ ಗಾಯಗಳು ಪಟಾಕಿಯಿಂದಲೇ ಉಂಟಾಗಿದೆಯಂತೆ.
ಈಗಂತೂ ದೀಪಾವಳಿಯ ಸಂಭ್ರಮವಿದೆ. ನೀವು ಎಷ್ಟೇ ತಡೆದರೂ ಮಕ್ಕಳನ್ನು ಪಟಾಕಿ ಹಚ್ಚೋದ್ರಿಂದ ತಪ್ಪಿಸಲು ಸಾಧ್ಯವೇ ಇಲ್ಲ. 25 ವರ್ಷದ ಆಸುಪಾಸಿನವರೇ ಸಾಧಾರಣವಾಗಿ ಪಟಾಕಿ ಸಂಬಂಧಿ ಗಾಯಗಳಿಂದ ಬಳಲುತ್ತಾರಂತೆ. ಮಕ್ಕಳಿಂದ ಹಿಡಿದು ಯುವಕರವರೆಗೂ ಪಟಾಕಿ ಹಚ್ಚುವ ವೇಳೆಯಲ್ಲಿ ಎಚ್ಚರಿಕೆ ಹೊಂದಿರೋದು ಅತ್ಯವಶ್ಯಕವಾಗಿದೆ.
ಹಾಗಾದರೆ ಪಟಾಕಿ ಹಚ್ಚುವ ಮುನ್ನ ಅಪಾಯ ಸಂಭವಿಸದಂತೆ ಯಾವೆಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬಹುದು ಅನ್ನೋದಕ್ಕೆ ಇಲ್ಲಿದೆ ಮಾಹಿತಿ :
ಇಕ್ಕಟ್ಟಿನ ಜಾಗಗಳಲ್ಲಿ ಎಂದಿಗೂ ಪಟಾಕಿ ಹಚ್ಚಬೇಡಿ. ಮುಕ್ತವಾದ ಜಾಗವನ್ನೇ ಆಯ್ಕೆ ಮಾಡಿ.
ಮಕ್ಕಳು ಎಂದಿಗೂ ಹಿರಿಯರ ಮಾರ್ಗದರ್ಶನದಲ್ಲಿಯೇ ಪಟಾಕಿಗಳನ್ನು ಸಿಡಿಸಿ.
ಒಳ್ಳೆಯ ಗುಣಮಟ್ಟದ ಪಟಾಕಿಗಳನ್ನು ಖರೀದಿಸಿ.
ರಕ್ಷಣಾತ್ಮಕ ಚಪ್ಪಲಿಗಳನ್ನು ಧರಿಸಿ.
ಪಟಾಕಿ ಹಚ್ಚುವ ವೇಳೆ ಊದುಬತ್ತಿಗೆ ಕೋಲನ್ನು ಸಿಕ್ಕಿಸಿಕೊಂಡಲ್ಲಿ ನೀವು ಪಟಾಕಿಯಿಂದ ಅಂತರ ಕಾಯ್ದುಕೊಳ್ಳಬಹುದು.
ಮಣ್ಣು, ನೀರು ಸಾಧ್ಯವಾದಲ್ಲಿ ಬೆಂಕಿ ನಂದಿಸುವ ಸಾಧನವನ್ನು ಸಮೀಪದಲ್ಲೇ ಇಟ್ಟುಕೊಳ್ಳಿ.
ಪಟಾಕಿ ಹಚ್ಚುವ ವೇಳೆ ಹತ್ತಿ ಬಟ್ಟೆ ಧರಿಸಿ.