ಪಾದರಕ್ಷೆಗಳನ್ನು ಖರೀದಿಸುವ ಮುನ್ನ ನೀವು ಈ ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದು ಮುಖ್ಯವಾಗುತ್ತದೆ.
ಯಾವುದೋ ಒಂದು ಪಾದರಕ್ಷೆ ನಿಮಗಿಷ್ಟವಾಯಿತು ಎಂದಿಟ್ಟುಕೊಳ್ಳೋಣ, ಆಗ ಅದಕ್ಕೆ ಹೆಚ್ಚು ಹಣ ತೆತ್ತಾದರೂ ಕೊಳ್ಳುವ ಮುನ್ನ ಅದು ನಿಮ್ಮ ಕಾಲಿಗೆ ಸರಿಯಾಗಿ ಹೊಂದಿಕೊಳ್ಳುತ್ತದೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ. ಕೊಂಡ ಬಳಿಕ ಸೈಜ್ ಎಡ್ಜಸ್ಟ್ ಮಾಡಿಕೊಳ್ಳೋಣ ಎಂಬ ಆಯ್ಕೆಯನ್ನು ಪಾದರಕ್ಷೆ ನಿಮಗೆ ಒದಗಿಸುವುದಿಲ್ಲ.
ಆಯಾ ಸೀಸನ್ ಗೆ ಸರಿಯಾಗಿ ಹೊಂದಿಕೊಳ್ಳುವ ಚಪ್ಪಲಿ ಖರೀದಿಸುವುದು ಜಾಣತನ, ಮಳೆಗಾಲದಲ್ಲಿ ಶೂ ಧರಿಸುವುದು ಕೆಲವೊಮ್ಮೆ ಆಭಾಸವಾದೀತು. ಅದರಲ್ಲೂ ಮಕ್ಕಳಿಗೆ ಹಾಕುವುದರಿಂದ ದಿನವಿಡೀ ಅವರು ಒದ್ದೆ ಶೂ ಧರಿಸಬೇಕಾದೀತು. ಹಾಗಾಗಿ ಆಯಾ ಋತುವಿಗೆ ಹೊಂದಿಕೊಳ್ಳುವ ಪಾದರಕ್ಷೆಯನ್ನೇ ಖರೀದಿಸಿ.
ಒಂದು ಕಾಲಿಗೆ ಚಪ್ಪಲಿ ಹಾಕಿ ಸರಿ ಹೊಂದುತ್ತದೆ ಎಂದು ಖರೀದಿಸದಿರಿ. ಎರಡೂ ಕಾಲಿಗೆ ಹಾಕಿಕೊಂಡು ನಾಲ್ಕು ಹೆಜ್ಜೆ ಹಾಕಿ ನೋಡಿ. ಸರಿಹೊಂದಿದರೆ ಮಾತ್ರ ಖರೀದಿಸಿ.
ಶೂ ಖರೀದಿ ಮಾಡುವ ಮುನ್ನ ನಿಮ್ಮ ಕಾಲಿನ ಬೆರಳಿನ ತುದಿಗಿಂತ ಅರ್ಧ ಇಂಚು ಜಾಗ ಹೆಚ್ಚಿರುವಂತೆ ನೋಡಿಕೊಳ್ಳಿ.