ಸದ್ಯ FIFA ವಿಶ್ವಕಪ್ ಹವಾ ನಡೆಯುತ್ತಿದೆ. ಮೈದಾನ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದೆ. ಹಾಗಾಗಿಯೇ FIFA ಆಟಗಾರರ ಬಗ್ಗೆ ಚರ್ಚೆ ನಡೆಯುತ್ತಿದೆ. ಫುಟ್ಬಾಲ್ ಹೆಸರು ಬಂದಾಗ ಎಲ್ಲರಿಗೂ ಮೊದಲ ಹೆಸರು ಮೆಸ್ಸಿ. ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಮೇಲೆ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವಿಶ್ವದ ಅದ್ಭುತ ಫುಟ್ಬಾಲ್ ಆಟಗಾರರ ಮೆಸ್ಸಿ ಗಳಿಕೆಯಲ್ಲೂ ಹಿಂದೆ ಬಿದ್ದಿಲ್ಲ.
ವಿಶ್ವದಲ್ಲೇ ಅತಿ ಹೆಚ್ಚು ಗಳಿಸುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಮೊದಲ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್ ವರದಿಯ ಪ್ರಕಾರ, ಮೆಸ್ಸಿ ಒಟ್ಟು ಗಳಿಕೆ 130 ಮಿಲಿಯನ್ ಡಾಲರ್. ಅಂದ್ರೆ ಸುಮಾರು 1062 ಕೋಟಿ ರೂಪಾಯಿ. ಇದರಲ್ಲಿ ಮೆಸ್ಸಿ ಕ್ರೀಡೆಗಳ ಮೂಲಕ 75 ಮಿಲಿಯನ್ ಡಾಲರ್ ಗಳಿಸುತ್ತಾರೆ. ಇತರೆ ವಿಷ್ಯದಲ್ಲಿ 55 ಮಿಲಿಯನ್ ಡಾಲರ್ ಗಳಿಸುತ್ತಾನೆ. ಮೆಸ್ಸಿಯ ನಿವ್ವಳ ಆದಾಯ ಸುಮಾರು 400 ಮಿಲಿಯನ್ ಡಾಲರ್. ಅಂದ್ರೆ ಸುಮಾರು 3268 ಕೋಟಿ ರೂಪಾಯಿ.
ಮೆಸ್ಸಿ, ಅಡಿಡಾಸ್, ಬಡ್‌ವೈಸರ್ ಮತ್ತು ಪೆಪ್ಸಿಕೋ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇವುಗಳ ಪರ ಪ್ರಚಾರ ಮಾಡಿ ಹಣ ಗಳಿಸ್ತಾರೆ. ಮೆಸ್ಸಿ ಮತ್ತು ಭಾರತದ ಕ್ರಿಕೆಟರ್ ವಿರಾಟ್ ಕೊಹ್ಲಿ ಆದಾಯದ ವ್ಯತ್ಯಾಸ ದೊಡ್ಡ ಮಟ್ಟದಲ್ಲಿದೆ. ಕೊಹ್ಲಿಯ ವಾರ್ಷಿಕ ಆದಾಯ 33.9 ಮಿಲಿಯನ್ ಡಾಲರ್. ಅವರ ನಿವ್ವಳ ಆದಾಯ 105 ಮಿಲಿಯನ್ ಡಾಲರ್.