ವಾತಾವರಣ ಬದಲಾದಂತೆ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ.
ಆದ್ರೆ ಅಗಸೆಬೀಜ ಅನೇಕ ರೋಗಗಳ ಅಪಾಯದಿಂದ ನಮ್ಮನ್ನು ರಕ್ಷಿಸುತ್ತವೆ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯ ಅಪಾಯದಿಂದ ನಮ್ಮನ್ನು ರಕ್ಷಿಸುತ್ತದೆ. ಇದು ನಮ್ಮ ಹೃದಯ ಮತ್ತು ಮನಸ್ಸನ್ನು ಆರೋಗ್ಯವಾಗಿರಿಸುತ್ತದೆ. ಇದು ಆಂಟಿ-ಅಲರ್ಜಿಕ್ ಸಿಲಿಯಮ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಒಂದು ಚಮಚ ಅಗಸೆಬೀಜವನ್ನು ಬಿಸಿ ಹಾಲಿನೊಂದಿಗೆ ಕುಡಿಯುವುದು ಅಥವಾ ಸಲಾಡ್ ಅಥವಾ ಮೊಸರಿನೊಂದಿಗೆ ತಿನ್ನುವುದ್ರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ತುಳಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತುಳಸಿ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ತುಂಬಾ ಪ್ರಯೋಜನಕಾರಿ. ತುಳಸಿಯ 5 ಎಲೆಗಳನ್ನು ಪ್ರತಿದಿನ ಒಂದು ಚಮಚ ಜೇನಿನೊಂದಿಗೆ ತಿನ್ನುವುದು ರೋಗಗಳ ವಿರುದ್ಧ ಹೋರಾಡುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ತುಳಸಿ ಎಲೆ ಜೊತೆ ಮೂರರಿಂದ ನಾಲ್ಕು ಕರಿಮೆಣಸನ್ನು ಅಗಿದು ನುಂಗುವುದು ಕೂಡ ಪ್ರಯೋಜನಕಾರಿ.
ಸೂರ್ಯಕಾಂತಿ ಬೀಜವನ್ನು ಚಾಟ್ ಮಸಾಲಾದೊಂದಿಗೆ ತಿನ್ನಬಹುದು. ಸಲಾಡ್‌ನೊಂದಿಗೂ ತಿನ್ನಬಹುದು. ವಿಟಮಿನ್ ಇ ಸಮೃದ್ಧವಾಗಿರುವ ಈ ಬೀಜಗಳು ಯಾವುದೇ ರೀತಿಯ ಬಾಹ್ಯ ಸೋಂಕಿನಿಂದ ನಮ್ಮನ್ನು ರಕ್ಷಿಸುತ್ತವೆ.
ಅರಿಶಿನವು ನಮ್ಮ ದೇಹವನ್ನು ಅಲರ್ಜಿಯಿಂದ ರಕ್ಷಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಬಿಸಿ ಹಾಲಿಗೆ ಒಂದು ಚಮಚ ಅರಿಶಿನ ಪುಡಿಯನ್ನು ಸೇರಿಸಿ ಕುಡಿಯುವುದು ತುಂಬಾ ಆರೋಗ್ಯಕರ.
ಶುಂಠಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕಾರಿ. ಶುಂಠಿ ಚಹಾವನ್ನು ಸೇವಿಸುವುದು ಪ್ರಯೋಜನಕಾರಿ. ಜೇನುತುಪ್ಪದೊಂದಿಗೆ ಶುಂಠಿಯನ್ನು ಸೇವಿಸಬಹುದು.
ದಾಲ್ಚಿನಿಯಲ್ಲೂ ರೋಗ ನಿರೋಧಕ ಶಕ್ತಿಯಿದೆ. ದಾಲ್ಚಿನಿಯನ್ನು ಆಹಾರದಲ್ಲಿ ಬಳಸಿ ಅಥವಾ ಟೀ ಮಾಡಿ ಕುಡಿಯಿರಿ.