ನವದೆಹಲಿ: ಸಂಸತ್ ಭವನದ ಕ್ಯಾಂಟೀನ್ನಲ್ಲಿ ಸಂಸದರಿಗೆ ಇನ್ನು ಮುಂದೆ ಆಹಾರ ಸಬ್ಸಿಡಿ ಲಭ್ಯವಿರುವುದಿಲ್ಲ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ.
ಸಂಸದರು ಮತ್ತು ಇತರರಿಗೆ ಸಂಸತ್ ಕ್ಯಾಂಟೀನ್ನಲ್ಲಿ ನೀಡುವ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಎರಡು ವರ್ಷಗಳ ಹಿಂದೆ ಆಹಾರ ಸಬ್ಸಿಡಿ ರದ್ದುಗೊಳಿಸಬೇಕೆಂದು ಬೇಡಿಕೆ ಕೇಳಿಬಂದಿತ್ತು. ಲೋಕಸಭೆ ವ್ಯವಹಾರ ಸಲಹಾ ಸಮಿತಿಯ ಎಲ್ಲ ಪಡೆಗಳ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದು, ಸಂಸತ್ ಕ್ಯಾಂಟೀನ್ನಲ್ಲಿ ಸಬ್ಸಿಡಿಯನ್ನು ರದ್ದು ಮಾಡಲಾಗಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಂಗಳವಾರ ತಿಳಿಸಿದ್ದಾರೆ.
ಇನ್ನು ಮುಂದೆ ನಿಗದಿತ ಬೆಲೆಗೆ ಸಂಸತ್ ಕ್ಯಾಂಟೀನ್ನಲ್ಲಿ ಊಟ, ತಿಂಡಿ ಲಭ್ಯವಿರುತ್ತದೆ. ಇದರಿಂದ 17 ಕೋಟಿ ರೂ.ಗೂ ಅಧಿಕ ಮೊತ್ತ ಉಳಿತಾಯವಾಗಲಿದೆ. ಸಂಸತ್ ಕ್ಯಾಂಟೀನ್ ನಲ್ಲಿ ಇನ್ನುಮುಂದೆ ಸಬ್ಸಿಡಿ ಇರುವುದಿಲ್ಲವೆಂದು ಹೇಳಲಾಗಿದೆ.