ಶಿವಮೊಗ್ಗ: ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪಡಿತರ ಚೀಟಿಯ ಸಂಖ್ಯೆಗಳ ಬದಲಾವಣೆ ಕುರಿತಂತೆ ಮಾಹಿತಿ ನೀಡಿದೆ.
ಪಡಿತರ ಚೀಟಿಗಳಲ್ಲಿ ಅಕ್ಷರಾಂಕಿಯ ಅಥವಾ 12 ಅಂಕಿಗಳಿಗಿಂತ ಭಿನ್ನವಾದ ಸಂಖ್ಯೆ ನೀಡಿರುವ ಪಡಿತರ ಚೀಟಿಗಳಿಗೆ ಇದೀಗ 12 ಅಂಕಿಗಳ ಹೊಸ ಸಂಖ್ಯೆ ನೀಡಲಾಗಿದ್ದು, ಇನ್ನು ಮುಂದೆ ಈ ಸಂಖ್ಯೆಯು ಪಡಿತರ ಚೀಟಿ ಸಂಖ್ಯೆಯಾಗಲಿದೆ.
ನೀವು ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ನಿಮ್ಮ ಪಡಿತರ ಚೀಟಿ/ಆಧಾರ್ ಅಥವಾ ಪಡಿತರ ಚೀಟಿ ಸಂಖ್ಯೆ ನೀಡಿದಾಗ ಬದಲಾಗಿರುವ ಪಡಿತರ ಚೀಟಿ ಸಂಖ್ಯೆನ್ನು ನೀಡಲು ಮತ್ತು ನಿಮ್ಮ ಪಡಿತರ ಚೀಟಿಯ ಮೇಲೆ ಬರೆಯಲು ನ್ಯಾಯಬೆಲೆ ಅಂಗಡಿಗಳಿಗೆ ತಿಳುವಳಿಕೆ ನೀಡಲಾಗಿದೆ. ಇನ್ನು ಮುಂದೆ ನೀವು ಬದಲಾಗಿರುವ ಹೊಸ ಪಡಿತರ ಚೀಟಿ ಸಂಖ್ಯೆ ಬಳಸುವಂತೆ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಯನ್ನು ನಿಮ್ಮ ನ್ಯಾಯಬೆಲೆ ಅಂಗಡಿಗಳಿಂದ ಪಡೆಯುವುದು ಹಾಗೂ ಈ ಸಂಬಂಧ ಯಾವುದೇ ಸಮಸ್ಯೆಗಳಿದ್ದರೆ ತಾಲೂಕಿನ ಆಹಾರ ಶಿರಸ್ತೆದಾರ್/ ಆಹಾರ ನಿರೀಕ್ಷಕರನ್ನು ಸಂಪರ್ಕಿಸುವುದು. ಯಾವುದೇ ದೂರುಗಳಿದ್ದಲ್ಲಿ ಆಹಾರ ಇಲಾಖೆಯ ನಿಯಂತ್ರಣ ಕೊಠಡಿ ಸಂಖ್ಯೆ 1967 ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ.