
ಬೆಂಗಳೂರು : ಬಿಪಿಎಲ್ ಕಾರ್ಡ್ ದಾರರಿಗೆ ಆಹಾರ ಇಲಾಖೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, 6 ತಿಂಗಳಿನಿಂದ ಪಡಿತರ ಪಡೆಯದ ಪಡಿತರ ಚೀಟಿ ರದ್ದುಪಡಿಸಲು ಮುಂದಾಗಿದೆ ಎನ್ನಲಾಗಿದೆ.
ಕೆಲವರು ಕಳೆದ 6 ತಿಂಗಳಿನಿಂದ ರೇಷನ್ ಪಡೆದಿಲ್ಲ ಎಂಬುದು ತಿಳಿದು ಬಂದಿದ್ದು, ಇಂತಹವರಿಗೆ ಆಹಾರ ಇಲಾಖೆ ಶಾಕ್ ನೀಡಿದ್ದು, ರೇಷನ್ ಪಡೆಯದವರ ರೇಷನ್ ಕಾರ್ಡ್ ಅಮಾನತು ಮಾಡಲು ಆಹಾರ ಇಲಾಖೆ ನಿರ್ಧರಿಸಿದೆ.ಯಾರು ಪ್ರತಿ ತಿಂಗಳು ರೇಷನ್ ಪಡೆಯುದಿಲ್ಲವೋ ಅಂತಹವರ ಕಾರ್ಡ್ ರದ್ದತಿಗೆ ಆಹಾರ ಇಲಾಖೆ ಮುಂದಾಗಿದೆ.
ಆರು ತಿಂಗಳಿಂದ ಒಟ್ಟು 3.26 ಲಕ್ಷ ಕುಟುಂಬ ಪಡಿತರವನ್ನೇ ಪಡೆದಿಲ್ಲ, ಈ ವಾರದಲ್ಲಿ 3.26 ಲಕ್ಷ ಕಾರ್ಡ್ಗಳು ರದ್ದಾಗಲಿವೆ ಎನ್ನಲಾಗಿದ್ದು, ರಾಜ್ಯದಲ್ಲಿ ಒಟ್ಟು 1 ಕೋಟಿ 52 ಲಕ್ಷದಷ್ಟು ಕಾರ್ಡ್ದಾರರಿದ್ದಾರೆ, BPL-1,27,82,893 ರೇಷನ್ ಕಾರ್ಡ್ಗಳಿವೆ. 4.37 ಕೋಟಿ ಜನರು ರೇಷನ್ ಪಡೆದುಕೊಳ್ಳುತ್ತಿದ್ದಾರೆ.