alex Certify ಬಾಸ್ಕೆಟ್​ಬಾಲ್​ ಆಟಕ್ಕೆ ಅಡ್ಡಿಪಡಿಸಿದ ಫುಡ್​ ಡೆಲಿವರಿ ಬಾಯ್​: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಸ್ಕೆಟ್​ಬಾಲ್​ ಆಟಕ್ಕೆ ಅಡ್ಡಿಪಡಿಸಿದ ಫುಡ್​ ಡೆಲಿವರಿ ಬಾಯ್​: ವಿಡಿಯೋ ವೈರಲ್​

ನ್ಯೂಯಾರ್ಕ್​: ಉಬರ್ ಈಟ್ಸ್‌ನ ಆಹಾರ ವಿತರಣಾ ಏಜೆಂಟ್ ಆರ್ಡರ್ ಅನ್ನು ತಲುಪಿಸುವ ಪ್ರಯತ್ನದಲ್ಲಿ ಬ್ಯಾಸ್ಕೆಟ್‌ಬಾಲ್ ಆಟವನ್ನು ಅಡ್ಡಿಪಡಿಸಿದ ವಿಡಿಯೋ ವೈರಲ್​ ಆಗಿದೆ. ಫಾಕ್ಸ್‌ಸ್ಪೋರ್ಟ್ಸ್ ಪ್ರಕಾರ, ಲೊಯೊಲಾ ಚಿಕಾಗೊ ಮತ್ತು ಡುಕ್ವೆಸ್ನೆ ನಡುವಿನ ಅಟ್ಲಾಂಟಿಕ್ 10 ಪಂದ್ಯದ ಸಮಯದಲ್ಲಿ ಈ ಘಟನೆ ನಡೆದಿದೆ.

ಮೆಕ್‌ಡೊನಾಲ್ಡ್ಸ್ ಅನ್ನು ಅಲ್ಲಿ ಯಾರೋ ಆರ್ಡರ್​ ಮಾಡಿದ್ದರು. ಅದು ಯಾರು ಎಂದು ಡೆಲವರಿ ಬಾಯ್​ಗೆ ತಿಳಿಯಲಿಲ್ಲ. ಈ ಹಿನ್ನೆಲೆಯಲ್ಲಿ ಆತ ಆಟ ನಡೆಯುತ್ತಿರುವಾಗಲೇ ನೇರವಾಗಿ ಕೋರ್ಟ್​ ಒಳಗೆ ನುಗ್ಗಿದ್ದಾನೆ! ಆರ್ಡರ್ ಮಾಡಿದವನ್ನು ಹುಡುಕುತ್ತಿದ್ದ ಕಾರಣ ಆಟಕ್ಕೆ ತೊಂದರೆಯಾಯಿತು. ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಪ್ರಕಾರ, ಡೆಲಿವರಿ ಫುಡ್ ಏಜೆಂಟ್ ಸುಮಾರು 10 ನಿಮಿಷಗಳ ಕಾಲ ಅಲೆದಾಡಿದ್ದಾನೆ. ಅತ ತನಗೆ ಬೇಕಾದವರಿಗಾಗಿ ಹುಡುಕಾಟ ನಡೆಸುತ್ತಿದ್ದ.

ಈ ಹಿನ್ನೆಲೆಯಲ್ಲಿ ಸಂಘಟಕರು ಆಟವನ್ನು ಸಂಕ್ಷಿಪ್ತವಾಗಿ ವಿರಾಮಗೊಳಿಸಬೇಕಾಯಿತು. ಡೆಲಿವರಿ ಬಾಯ್​ ಅನ್ನು ಮೈದಾನಕ್ಕೆ ಹೇಗೆ ಬಿಟ್ಟರು ಎಂಬ ಬಗ್ಗೆ ಕ್ರೀಡಾ ಪ್ರಿಯರು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕೆಲವರು ಡೆಲಿವರಿ ಏಜೆಂಟ್‌ನ ಸಮರ್ಪಣೆಯನ್ನು ಶ್ಲಾಘಿಸುತ್ತಿದ್ದಾರೆ. ಆಟದ ಸಮಯದಲ್ಲಿನ ಭದ್ರತೆಯನ್ನು ಇನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...