alex Certify ಆಹಾರದ ಹಾಹಾಕಾರಕ್ಕೆ ತತ್ತರಿಸಿದ ಉತ್ತರ ಕೊರಿಯಾ: ಕೆಜಿ ಬಾಳೆಹಣ್ಣಿಗೆ 3300 ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಹಾರದ ಹಾಹಾಕಾರಕ್ಕೆ ತತ್ತರಿಸಿದ ಉತ್ತರ ಕೊರಿಯಾ: ಕೆಜಿ ಬಾಳೆಹಣ್ಣಿಗೆ 3300 ರೂ.

ಉತ್ತರ ಕೊರಿಯಾದಲ್ಲಿ ಆಹಾರ ಪದಾರ್ಥಗಳಿಗೆ ಹಾಹಾಕಾರ ಶುರುವಾಗಿದ್ದು ಇದರಿಂದ ಅಗತ್ಯ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ದೇಶದಲ್ಲಿ ಉಂಟಾಗಿರುವ ಆಹಾರ ಪದಾರ್ಥಗಳ ಅಭಾವವನ್ನ ಗಮನದಲ್ಲಿರಿಸಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​​ ದೇಶದ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಚಂಡಮಾರುತ ಕೃಷಿ ವಲಯದ ಮೇಲೆ ತುಂಬಾನೇ ಹಾನಿ ಉಂಟು ಮಾಡಿದ್ದು ಇದರಿಂದಾಗಿ ದೇಶದ ಜನತೆಗೆ ಅಗತ್ಯ ಪ್ರಮಾಣದಲ್ಲಿ ಇರುವಷ್ಟು ಆಹಾರವನ್ನ ಪೂರೈಸುವಲ್ಲಿ ಉತ್ಪಾದನಾ ವಲಯ ಸಂಪೂರ್ಣ ವಿಫಲವಾಗಿದೆ. ಇದೇ ಕಾರಣಕ್ಕೆ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ಕಿಮ್​ ಜಾಂಗ್​ ಉನ್​ ಒಪ್ಪಿಕೊಂಡಿದ್ದಾರೆ.

ಉತ್ತರ ಕೊರಿಯಾದ ರಾಜಧಾನಿ ಪ್ಯೊಂಗ್ಯಾಂಗ್ ನಲ್ಲಿ ಆಹಾರ ಉತ್ಪನ್ನಗಳ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಪ್ರತಿ ಕೆಜಿ ಬಾಳೆಹಳ್ಳಿಗೆ 3345 ರೂಪಾಯಿ, 1 ಪ್ಯಾಕೆಟ್​ ಬ್ಲಾಕ್​ ಟೀ ದರ 5190 ರೂಪಾಯಿ ಹಾಗೂ 1 ಪಾಕೆಟ್​​ ಕಾಫಿ ದರ 7414 ರೂಪಾಯಿ ಆಗಿದೆ.

ಕೇಂದ್ರ ಸಮಿತಿ ಸಭೆಯಲ್ಲಿ ಪಕ್ಷದ ನಾಯಕರೊಂದಿಗೆ ಮಾತನಾಡಿರುವ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​​ ದೇಶದಲ್ಲಿ ತಲೆದೂರಿರುವ ಆಹಾರ ಉತ್ಪನ್ನಗಳ ಅಭಾವವನ್ನ ಆದಷ್ಟು ಬೇಗ ಸರಿಪಡಿಸುವಂತೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

ಕೃಷಿ ವಲಯದಲ್ಲಿ ಬೇಡಿಕೆಗೆ ತಕ್ಕಷ್ಟು ಬೆಳೆಯನ್ನ ಬೆಳೆಯುವಲ್ಲಿ ಉತ್ತರ ಕೊರಿಯಾ ವಿಫಲವಾಗಿರೋದೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ. ಮೂಲಗಳ ಪ್ರಕಾರ ಉತ್ತರ ಕೊರಿಯಾ 8,60,000 ಟನ್​ ಮೌಲ್ಯದ ಆಹಾರದ ಕೊರತೆಯನ್ನ ಎದುರಿಸುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...