ಇತ್ತೀಚೆಗೆ ರಸಗುಲ್ಲಾ ಚಾಟ್‌ವೊಂದನ್ನು ಸೇವ್ ಬಳಸಿ ಮಾಡಿದ್ದ ವ್ಯಕ್ತಿಯೊಬ್ಬನ ವಿಡಿಯೊ ವೈರಲ್ ಆಗಿತ್ತು. ಪುಣ್ಯಾತ್ಮ ಸಿಹಿಯಾದ ರಸಗುಲ್ಲಾಗೆ ಮೊಸರು, ಚಟ್ನಿಗಳನ್ನು ಬೆರೆಸಿ ವಿಶಿಷ್ಟ ಚಾಟ್ ತಯಾರಿಸಿದ್ದ.
ಈತನ ಅಂಗಡಿಯನ್ನು ಹುಡುಕಿಕೊಂಡು, ಚಾಟ್‌ನ ರುಚಿ ಪರೀಕ್ಷಿಸಲು ಫುಡ್ ಬ್ಲಾಗರ್‌ವೊಬ್ಬರು ತೆರಳಿದ್ದಾರೆ. ಆಕೆಯ ಹೆಸರು ಅಂಜಲಿ ಧಿಂಗ್ರಾ ಎಂದು. ರಸಗುಲ್ಲಾ ಚಾಟ್ ಬಾಯಿಗೆ ಇಟ್ಟಕೂಡಲೇ ಆಕೆಯ ಮುಖದಲ್ಲಿ ಕಂಡುಬಂದ ಭಾವಕ್ಕೆ ಸದ್ಯ ನೆಟ್ಟಿಗರು ಫಿದಾ ಆಗಿದ್ದಾರೆ. ಆಕೆಯ ಚಾಟ್ ಸವಿಯುವ ವಿಡಿಯೊ ಇನ್‌ಸ್ಟಾಗ್ರಾಂನಲ್ಲಿ ಭಾರಿ ವೈರಲ್ ಆಗಿದೆ.
ಈ ಹೊಸ ಮತ್ತು ವಿಚಿತ್ರ ಚಾಟ್ ಹೆಸರು ’ ಟಿಕ್ಕಿ ರಸಗುಲ್ಲಾ ಚಾಟ್ ’. ಒಂದು ಪ್ಲೇಟ್‌ಗೆ 140 ರೂ. ಬಹಳ ನಿರೀಕ್ಷೆಯಿಂದ ಚಾಟ್ ಸವಿದ ಅಂಜಲಿಗೆ, ನಿಜದಲ್ಲಿ ಭಾರಿ ನಿರಾಶೆಯಾಗಿದೆ. ಆಕೆಗೆ ಚಾಟ್‌ನ ರುಚಿ ಹಿಡಿಸಿಲ್ಲ ಎನ್ನುವುದು ಆಕೆಯ ಸಂಶಯಾಸ್ಪದ ಮುಖಭಾವದಿಂದಲೇ ವಿಡಿಯೊ ಖಾತ್ರಿಪಡಿಸುತ್ತದೆ.
ಕಣ್ಣಂಚನ್ನು ತೇವಗೊಳಿಸುತ್ತೆ ಮೊದಲ ಬಾರಿಗೆ ಜಗತ್ತನ್ನು ಸ್ಪಷ್ಟವಾಗಿ ನೋಡಿದ ಎರಡು ವರ್ಷದ ಬಾಲಕಿಯ ಹೃದಯಸ್ಪರ್ಶಿ ವಿಡಿಯೋ
ಚಾಟ್ ಹೆಸರಿನಲ್ಲಿ ಖಾದ್ಯಗಳಿಗೆ ಹೊಸ ರುಚಿ ನೀಡುವ ಭರದಲ್ಲಿ ಬಂಗಾಲಿ ಸ್ವೀಟ್ಸ್‌ಗಳ ರಾಜ ’ರಸಗುಲ್ಲಾ’ವನ್ನು ಹಾಳು ಮಾಡಲಾಗುತ್ತಿದೆ ಎಂದು ಆಕ್ರೋಶಭರಿತವಾಗಿ ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಅಂಜಲಿಯ ವಿಡಿಯೊ ಕೆಳಗೆ ಕಮೆಂಟ್ ಮಾಡಿದ್ದಾರೆ.
ನಿಮ್ಮ ಹುಚ್ಚು ಐಡಿಯಾಗಳಿಂದ ರಸಗುಲ್ಲಾವನ್ನು ಕಾಪಾಡಲೇಬೇಕು. ಈ ಹಿಂದೆ ‘ಚಾಕೋಲೆಟ್ ಮ್ಯಾಗಿ’ ಎಂಬ ಹೊಸ ಖಾದ್ಯ ತಯಾರಿಸಿ, ಸಾಮಾಜಿಕ ಜಾಲತಾಣ ಬಳಕೆದಾರರಿಂದ ಭಾರಿ ಛೀಮಾರಿ ಸಿಕ್ಕಿದ್ದು ಜ್ಞಾಪಕವಿಲ್ಲವೇ ಎಂದು ಮತ್ತೊಬ್ಬರು ಕಮೆಂಟ್ ಮಾಡಿ ಎಚ್ಚರಿಸಿದ್ದಾರೆ ಕೂಡ.
https://youtu.be/F70L_SUbEb8